Site icon PowerTV

ಆಲಿಕಲ್ಲು ಸಹಿತ ಭಾರಿ ಮಳೆಗೆ ಅಪಾರ ಪ್ರಮಾಣದ ಭತ್ತ ನಾಶ

ಕೊಪ್ಪಳ: ರಾಜ್ಯದಲ್ಲಿ ಕಳೆದ ಕೆಲದಿನಗಳಿಂದ ಮಳೆಯ ಮುನ್ಸೂಚನೆಯಿದ್ದು. ಏ.13ರ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರ ನಡುವೆ ಇಂದು ಮಧ್ಯಹ್ನ ಕೊಪ್ಪಳದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು. ಮಳೆಗೆ ಭತ್ತದ ಬೆಳೆ ನಾಶವಾಗಿದೆ.

ಕೊಪ್ಪಳದ ಕಾರಟಗಿಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು. ಬರೋಬ್ಬರಿ ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯಿಂದಾಗಿ ಕೈಗೆ ಬಂದಿದ್ದ ಭತ್ತದ ಬೆಳೆ ನಾಶವಾಗಿದೆ. ಮಳೆಯ ಜೊತೆಗೆ ಅಪಾರ ಪ್ರಮಾಣದ ಆಲಿಕಲ್ಲು ಸುರಿದಿದ್ದು. ಸ್ಥಳೀಯರು ಆಲಿಕಲ್ಲು ಮಳೆಯನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರಿಕರಿಸಿದ್ದಾರೆ.

ಇದನ್ನೂ ಓದಿ : ರಾಣ ಹಸ್ತಾಂತರವನ್ನು ಯುಪಿಎ ಅವಧಿಯಲ್ಲಿ ಆರಂಭಿಸಿದ್ದೆವೂ; ಅದರ ಕೀರ್ತಿಯನ್ನು ಮೋದಿ ಪಡೆದಿದ್ದಾರೆ; ಪಿ.ಚಿದಂಬರಂ

ಅಕಾಲಿಕ ಮಳೆಯಿಂದಾಗಿ ಒಣಗಲು ಹಾಕಿದ್ದ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದ್ದು. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹವಮಾನ ಇಲಾಖೆಯ ವರದಿಯ ಪ್ರಕಾರ ಏ.13ರಿಂದ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Exit mobile version