ಶೀಘ್ರದಲ್ಲೇ ಖಾಸಗಿ ಬಸ್​ ಟಿಕೆಟ್​ ದರ ಹೆಚ್ಚಳ ಖಚಿತ

ಬೆಂಗಳೂರು : ಪ್ರತಿದಿನವೂ ಒಂದಿಲ್ಲೊಂದು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಶೀಘ್ರದಲ್ಲೆ ಒದಗಿ ಬರಲಿದ್ದು. ಖಾಸಗಿ ಬಸ್​​ ಟಿಕೆಟ್​ ದರವನ್ನು ಶೀಘ್ರದಲ್ಲೇ ಏರಿಕೆ ಮಾಡಲಾಗುವುದು ಎಂದು ಖಾಸಗಿ ಬಸ್​ ಮಾಲೀಕರ ಸಂಘ ತಿಳಿಸಿದೆ.

ರಾಜ್ಯದಲ್ಲಿ ಪ್ರತಿದಿನವೂ ಒಂದಿಲ್ಲ ಒಂದು ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಡೀಸೆಲ್​ ದರ ಹೆಚ್ಚಳ ಮಾಡದ ಪರಿಣಾಮವಾಗಿ ಖಾಸಗಿ ಬಸ್​ ಟಿಕೆಟ್​ ದರವನ್ನು ಹೆಚ್ಚಿಸಲು ಖಾಸಗಿ ಬಸ್​ ಮಾಲೀಕರು ತೀರ್ಮಾನಿಸಿದ್ದು. ಏಪ್ರೀಲ್​ 15ರ ಒಳಗೆ ಡೀಸೆಲ್​ ದರವನ್ನು ಕಡಿಮೆ ಮಾಡದಿದ್ದರೆ ನಂತರ ಬಸ್ ಟಿಕೆಟ್​ ದರವನ್ನು ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ :ಪೈಶಾಚಿಕ ಕೃತ್ಯ; 16 ವರ್ಷದ ಮಗಳ ಮೇಲೆ ತಂದೆಯಿಂದ ನಿರಂತರ ಅತ್ಯಾಚಾರ

ಡೀಸೆಲ್​ ದರ ಹೆಚ್ಚಳವಾಗಿದ್ದು. ಟೈರ್​, ಬಸ್​ ಬಿಡಿಭಾಗಗಳು, ಟೋಲ್​ ಸೇರಿದಂತೆ ಎಲ್ಲಾ ಬೆಲೆಗಳು ಏರಿಕೆಯಾಗಿದ್ದು. ಬಸ್​ ಟಿಕೆಟ್​ ದರವನ್ನು ಹೆಚ್ಚಿಸುವುದು ಅನಿವಾರ್ಯವೆಂದು ಖಾಸಗಿ ಬಸ್​ ಮಾಲೀಕರು ತಿಳಿಸಿದ್ದಾರೆ. ಪ್ರತಿ ಸ್ಟೇಜ್​ಗೆ 2 ರೂಪಾಯಿ ದರ ಹೇರಿಕೆ ಮಾಡಬೇಕು ಎಂದು ಪ್ರಸ್ತಾವನೆ ಇದ್ದು. ಶೇಕಡಾ 15%ರಷ್ಟು ದರ ಏರಿಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ..!

ಈಗಾಗಲೇ ಡೀಸೆಲ್​ ದರ ಏರಿಕೆಯನ್ನು ವಿರೋಧಿಸಿ ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಕರೆ ಕೊಟ್ಟಿದ್ದು. ಇದೇ ಏಪ್ರೀಲ್​ 15ರಿಂದ ಅನಿರ್ಧಿಷ್ಟಾವದಿಗೆ ಮುಷ್ಕರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಮುಷ್ಕರಕ್ಕೆ ಖಾಸಗಿ ಬಸ್​ ಮಾಲೀಕರು ಬೆಂಬಲ ಇಲ್ಲ ಎಂದು ತಿಳಿಸಿದ್ದು. ಪ್ರತ್ಯೇಕವಾಗಿ ಬಂದ್​ ಮಾಡಬೇಕಾ ಎಂದು ಶೀಘ್ರದಲ್ಲೇ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES