Site icon PowerTV

1200 ರೂಪಾಯಿ ಇದ್ದ ಗ್ಯಾಸ್​ ರೇಟ್​ನ್ನ ಮೋದಿ 850ರೂಗೆ ಕಡಿಮೆ ಮಾಡಿದ್ದಾರೆ; ಪ್ರತಾಪ್​ ಸಿಂಹ

ಮೈಸೂರು: ಮಾಜಿ ಸಂಸದ ಪ್ರತಾಪ್​ ಸಿಂಹ ಗ್ಯಾಸ್​ ಬೆಲೆ ಹೆಚ್ಚಳದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು. ಮೊದಲು 1200 ಇದ್ದ ಗ್ಯಾಸ್​ ಬೆಲೆ ಇದೀಗ 850ಕ್ಕೆ ಇಳಿಕೆಯಾಗಿದೆ. ಪೈಪ್​ ಮೂಲಕ ಗ್ಯಾಸ್​ ನೀಡುವ ಯೋಜನೆ ಆರಂಭವಾದರೆ ಇದು 450ರಿಂದ 500ರೂಪಾಯಿಗೆ ಇಳಿಕೆಯಾಗಲಿದೆ ಎಂದು ಹೇಳಿದರು.

ಜಿದ್ದಾಜಿದ್ದಿಗೆ ಬಿದ್ದಿರುವಂತೆ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರ ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು. ಇದರ ನಡುವೆ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​​ ನಾಯಕರು ಹೋರಾಟ ಕೈಗೊಂಡಿದ್ದಾರೆ. ಇದರ ನಡುವೆ ಪ್ರತಾಪ್​ ಸಿಂಹ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು. ಮೂರು ವರ್ಷದ ಹಿಂದೆ 1200 ರೂಪಾಯಿ ಇದ್ದ ಗ್ಯಾಸ್​ ಬೆಲೆ 850ಕ್ಕೆ ಇಳಿಕೆಯಾಗಿದೆ. ಇದನ್ನು ಇನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು. ಪೈಪ್​ ಮೂಲಕ ಗ್ಯಾಸ್​ ನೀಡಲು ಯೋಜನೆ ರೂಪಿಸಿದ್ದಾರೆ.

ಇದನ್ನೂ ಓದಿ :ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್​ಗೆ ಖಡಕ್ ಸೂಚನೆ ಕೊಟ್ಟ ನ್ಯಾಯಾಧೀಶರು..!

ಪ್ರಧಾನಿ ಮೋದಿ ಗುಜರಾತ್​ ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ ಪೈಪ್​ ಮೂಲಕ ಗ್ಯಾಸ್​ ನೀಡುವ ಯೋಜನೆ ಆರಂಭಿಸಿದ್ದರು. ಅದೇ ರೀತಿ ಈಗಲೂ ಪೈಪ್​ ಮೂಲಕ ಗ್ಯಾಸ್​ ನೀಡಲು ಯೋಜನೆಗಳು ಕಾರ್ಯರೂಪದಲ್ಲಿವೆ. ಮೈಸೂರಿನಲ್ಲೂ ಇಂತಹ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ರೀತಿ ಪೈಪ್​ ಮೂಲಕ ಗ್ಯಾಸ್​ ಸರಬರಾಜು ಮಾಡಿದರೆ ಅದರ ಬೆಲೆ ಹೆಚ್ಚೆಂದರೆ 450 ರಿಂದ 500ರೂಪಾಯಿಗೆ ಇಳಿಕೆಯಾಗಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ..!

ಸಿದ್ದರಾಮಯ್ಯ ಸರ್ಕಾರದ ಬೆಲೆ ಏರಿಕೆ ಕುರಿತು ಮಾತನಾಡಿದ ಪ್ರತಾಪ್​ ಸಿಂಹ ‘ ಸಿದ್ದರಾಮಯ್ಯ ಸರ್ಕಾರದಲ್ಲಿ ಏನೆಲ್ಲಾ ಜಾಸ್ತಿಯಾಗಿದೆ ಎಂದು ಗೊತ್ತಾ ? ಗೃಹಲಕ್ಷ್ಮಿ ಹಣ ಬಂತಾ? ಯುವನಿಧಿ ಹಣ ಬಂತಾ? ಗ್ಯಾರಂಟಿ ಹೆಸರಿನಲ್ಲಿ ಎಲ್ಲಾ ಬೆಲೆ ಜಾಸ್ತಿ ಮಾಡಿದ್ದಾರೆ. ಜನರಿಗೆ ಒಂದಾದರೂ ಕಡಮೆ ದರದಲ್ಲಿ ಸಿಗುವಂತೆ ಸಿದ್ದರಾಮಯ್ಯ ಮಾಡಿದ್ದಾರಾ?. ಸಿದ್ದರಾಮಯ್ಯ ಸರಕಾರ ಲೂಟಿ ಹೊಡೆಯುತ್ತಾ ಎಲ್ಲದರಲ್ಲೂ ಸುಲಿಗೆ ಮಾಡುತ್ತಿದೆ.

ಡಿಕೆ ಶಿವಕುಮಾರ್ ಅವರು ಬ್ರ್ರಾಂಡ್ ಬೆಂಗಳೂರು ಮಾಡ್ತಿನಿ ಅಂತಾ ಗುಂಡಿ ಬೆಂಗಳೂರು ಮಾಡಿದ್ದಾರೆ. ಸ್ಟ್ಯಾಲಿನ ಹತ್ತಿರ ಹೋದಾಗ ಮೇಕೆದಾಟು ಬಗ್ಗೆ ಯಾಕೆ ಮಾತಾಡಲಿಲ್ಲ. ಜನರು ಬಿಜೆಪಿ ಸರಿ ಇಲ್ಲಾ ಎಂದು ಕಾಂಗ್ರೆಸ್​ ಸರ್ಕಾರವನ್ನು ಅಧಿಕಾರಕ್ಕೆ ತಂದು ಕೂರಿಸಿದರು. ಆದರೆ ಈಗ ಜನರು ನಿಮ್ಮನ್ನು ಛೀ-ತೂ ಎಂದು ಉಗಿಯುತ್ತಿದ್ದಾರೆ. ಅದರ ಬಗ್ಗೆ ನೋಡಿಕೊಳ್ಳಿ ಎಂದು ಹೇಳಿದರು.

Exit mobile version