Site icon PowerTV

ಸಾಲಭಾದೆ; ಪುಟಾಣಿ ಮಕ್ಕಳಿಬ್ಬರನ್ನು ಅನಾಥವಾಗಿಸಿ ದಂಪತಿ ಆತ್ಮಹ*ತ್ಯೆ

ಹಾವೇರಿ : ಜಿಲ್ಲೆಯಲ್ಲೊಂದು ಮನಕಲಕುವ ಘಟನೆ ನಡೆದಿದ್ದು. ಸಾಲಭಾದೆಗೆ ಬೇಸತ್ತ ಗಂಡ-ಹೆಂಡತಿ ಪುಟಾಣಿ ಮಕ್ಕಳನ್ನು ಅನಾಥವಾಗಿ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು 25 ವರ್ಷದ ಸೌಮ್ಯ ಮತ್ತು 32 ವರ್ಷದ ಗುಡ್ಡಪ್ಪ ಎಂದು ಗುರುತಿಸಲಾಗಿದೆ.

ಗುಡ್ಡಪ್ಪ ಮತ್ತು ಸೌಮ್ಯ ಇಬ್ಬರು ಹಾವೇರಿಯ, ರಾಣಿಬೆನ್ನೂರಿನ, ಕರೂರು ಎಂಬ ಗ್ರಾಮದಲ್ಲಿ ವಾಸವಾಗಿದ್ದರು. ದಂಪತಿಗಳು ಜಮೀನಿನ ಮೇಲೆ ಖಾಸಗಿ ಬ್ಯಾಂಕಿವೊಂದರಲ್ಲಿ ಸಾಲ ಪಡೆದಿದ್ದು. ಇದರ ಜೊತೆಗೆ ಹೊಸ ಮನೆ ನಿರ್ಮಾಣಕ್ಕೂ ಕೈಹಾಕಿದ್ದರು. ಇದರಿಂದ ಸಾಲ ಹೆಚ್ಚಾಗಿ ಇಬ್ಬರು ಸಾಲಬಾಧೆಯಿಂದ ಬಳಲುತ್ತಿದ್ದರು. ಇದೇ ವಿಚಾರಕ್ಕೆ ದಂಪತಿಗಳು ತಾವು ನಿರ್ಮಿಸುತ್ತಿದ್ದ ನಿರ್ಮಾಣ ಹಂತದ ಮನೆಯಲ್ಲೇ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ :ಆಭರಣ ಪ್ರಿಯರಿಗೆ ಗುಡ್​ ನ್ಯೂಸ್​; ಚಿನ್ನದ ದರ ಇಳಿಕೆ

ದಂಪತಿಗಳ ಆತ್ಮಹತ್ಯೆಯಿಂದ ಪುಟಾಣಿ ಮಕ್ಕಳಿಬ್ಬರು ಅನಾಥರಾಗಿದ್ದು. ತಂದೆ-ತಾಯಿ ಪ್ರೀತಿ ಪಡೆದು ಬೆಳೆಯಬೇಕಿದ್ದ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡಿದ್ದಾರೆ. ಕುಮಾರ ಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version