68ರ ಮುದಕನಿಗೆ ಹನಿಟ್ರ್ಯಾಪ್​; 2 ಕೋಟಿಗೆ ಡಿಮ್ಯಾಂಡ್​ ಮಾಡಿದ ಕಿರಾತಕರು..!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಹನಿಟ್ರ್ಯಾಪ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಹನಿಗ್ಯಾಂಗ್​ ಒಂದು 68ರ ವೃದ್ದನಿಗೆ ಹನಿಟ್ರ್ಯಾಪ್​ ಮಾಡಿ 2 ಕೋಟಿಗೆ ಡಿಮ್ಯಾಂಡ್​ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು.. ವಿಧಾನಸೌದದಿಂದ ಹಿಡಿದು ಎಲ್ಲೆಲ್ಲೂ ಹನಿಟ್ರ್ಯಾಪ್​ ಹಂಗಾಮ ಮಾಡುತ್ತಿದ್ದು. ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಹನಿಟ್ರ್ಯಾಪ್​ ಪ್ರಕರಣ ದಾಖಲಾಗಿದೆ. 68ರ ವೃದ್ದನಿಗೆ ಹನಿಟ್ರ್ಯಾಪ್​ ಮಾಡಿದ್ದು. ಅಜಯ್​ ಮತ್ತು ಅಭಿ ಎಂಬುವವರು ವೃದ್ದನಿಗೆ 2 ಕೋಟಿ ಹಣಕ್ಕೆ ಡಿಮ್ಯಾಂಡ್​ ಮಾಡಿದ್ದಾರೆ. ಖಾಸಗಿ ವಿಡಿಯೋಗಳನ್ನು ಚಿತ್ರಿಕರಿಸಿಕೊಂಡು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ :ಹೆಂಡತಿ ಕೊ*ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ ಮುಂದೆ, ಪ್ರತ್ಯಕ್ಷವಾದ ಹೆಂಡತಿ..!

ಕೋರಮಂಗಲದ ಕೆಫೆಯೊಂದರಲ್ಲಿ ವೃದ್ದನೊಂದಿಗೆ ಬೆದರಿಕೆ ಹಾಕಿದ್ದ ಆರೋಪಿಗಳು. 40 ಲಕ್ಷ ಹಣಕ್ಕೆ ಡೀಲ್​ ಕುದುರಿಸಿದ್ದರು. ಎರಡು ಮೂರು ದಿನದೊಳಗೆ ಹಣ ನೀಡುವಂತೆ ವೃದ್ದನಿಗೆ ಬೆದರಿಕೆಯನ್ನು ಹಾಕಿದ್ದರು. ಆದರೆ ವೃದ್ದ ಕೋರಮಂಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಪಿಗಳಿಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES