ಬೆಂಗಳೂರು : ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರ ಕಳೆದ ಕೆಲ ದಿನಗಳಿಂದ ಭಾರಿ ಸದ್ದು ಮಾಡುತ್ತಿದ್ದು. ಸಚಿವ ಕೆ.ಎನ್ ರಾಜಣ್ಣ ಸದನದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದರು. ಇದರ ಬಗ್ಗೆ ಮಾತನಾಡಿದ್ದ ಡಿಸಿಎಂ ಡಿಕೆಶಿ ಹನಿಟ್ರ್ಯಾಪ್ ಮಾಡುವವರು ಹಾಯ್ ಅಂದರೆ ಇವರು ಹಲೋ ಎನ್ನುತ್ತಾರೆ. ಇವರು ಸುಮ್ಮನ್ನಿದ್ದರೆ ಯಾರು ಹನಿಟ್ರ್ಯಾಪ್ ಮಾಡುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ‘ನಾವು ಎಲ್ಲರಿಂದ ಬಹಳ ಎಚ್ಚರವಾಗಿರಬೇಕು. ಇಂತಹದಕ್ಕೆಲ್ಲಾ ಇತೀಶ್ರೀ ಹಾಡಬೇಕು. ಬೇರೆಯವರು ಹಾಯ್ ಎಂದಾಗ ನಾವು ಹಾಯ್ ಎನ್ನಬಾರದು. ಅವರು ಹಾಯ್ ಎಂದರೆ ನಾವು ಬಾಯ್,ಬಾಯ್ ಎಂದು ಓಡಿಹೋಗಬೇಕು. ರಾಜಣ್ಣ ಹಾಯ್ ಅಂದವರಿಗೆ ಬಾಯ್ ಬಾಯ್ ಅಂದಿದ್ದಾರೆ.
ಇದನ್ನೂ ಓದಿ :ಮದುವೆಯಾಗಬೇಕಿದ್ದ ಹುಡುಗನನ್ನೇ ಕೊಲ್ಲಲ್ಲು ಸುಪಾರಿ ಕೊಟ್ಟ ವಧು..!
ನಾವೆಲ್ಲರೂ ರಾಜಣ್ಣನ ಹಾಗೆ ಇರಬೇಕೂ, ಅವರು ಹಾಯ್ ಅಂದರೆ ನಾವು ಹಾಯ್ ಅನ್ನಬಾರದು. ರಾಜಣ್ಣ ಮೊದಲು ಹಾಯ್ ಅಂದಿರಬೇಕು. ಆದರೆ ನನ್ನ ಜೊತೆ ಮಾತಾಡಿದಾಗ ಬಾಯ್ ಎಂದಿದ್ದೇನೆ ಎಂದು ಹೇಳಿದ್ದಾರೆ ಎಂದು ಹೇಳಿದರು.


