Site icon PowerTV

14 ಗಂಟೆಗಳ ಸುದೀರ್ಘ ಚರ್ಚೆ; ಮಧ್ಯರಾತ್ರಿ 2 ಗಂಟೆಗೆ ವಕ್ಫ್​ ಕಾಯ್ದೆಗೆ ಲೋಕಸಭೆ ಅಸ್ತು..!

ದೆಹಲಿ: ಮೋದಿ ಸರ್ಕಾರದ ಬಹುನಿರೀಕ್ಷಿತ ವಕ್ಫ್ ತಿದ್ದುಪಡಿ​ ಕಾಯ್ದೆಯನ್ನು ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು. ಬುಧವಾರ ಮಧ್ಯರಾತ್ರಿ 1:43ಕ್ಕೆ ಮಸೂದೆಗೆ ಒಪ್ಪಿಗೆ ದೊರೆತಿದೆ. ಇದಕ್ಕೂ ಮುನ್ನ ಉಭಯ ನಾಯಕರು ಸುದೀರ್ಘ 14 ಗಂಟೆಗಳ ಕಾಲ ಮಸೂದೆ ಮೇಲೆ ಚರ್ಚೆ ನಡೆಸಿದರು.

ಬಹು ವಿವಾದಿತ ವಕ್ಫ್​ ತಿದ್ದುಪಡಿ ಮಸೂದೆಗೆ ಕೊನೆಗೂ ಲೋಕಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಮಸೂದೆಯ ಮೇಲೆ ಸುಮಾರು 12 ಗಂಟೆಗಳಷ್ಟು ಸುದೀರ್ಘ ಚರ್ಚೆ ನಡೆದಿದ್ದು. 12 ಗಂಟೆಗಳ ಚರ್ಚೆಯ ನಂತರ 2 ಗಂಟೆಗಳ ಕಾಲ ಮತದಾನ ನಡೆದಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಸೂದೆಗೆ ಲೋಕಸಭೆ ಅಂಗೀಕರಿಸಿದ್ದು. ಮಸೂದೆ ಪರ 288 ಹಾಗೂ ಮಸೂದೆ ವಿರುದ್ಧ 232 ಮತ ಬಿದ್ದವು.

ನಿನ್ನೆ ಲೋಕಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್​ ರಿಜಿಜು ಮಸೂದೆಯನ್ನು ಮಂಡಿಸಿದರು. ಈ ಮಸೂದೆಯ ಕುರಿತು ವಿರೋಧ ಪಕ್ಷದ ಉಪನಾಯಕ ಸೌರಬ್​ ಗೋಗಯ್​, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​, ಡಿಎಂಕೆಯ ಎ.ರಾಜ, ಸಂಸದ ಅನುರಾಗ್​ ಠಾಕೂರ್​, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ನಾಯಕರು ಸುದೀರ್ಘ ಚರ್ಚೆಯನ್ನು ನಡೆಸಿದ ನಂತರ ಕೊನೆಗೂ ಮಸೂದೆಗೆ ಒಪ್ಪಿಗೆ ದೊರೆತಿದೆ.

ಇದನ್ನೂ ಓದಿ :ವಕ್ಫ್​ ಮಸೂದೆ ಮಂಡನೆಗೆ ಮುಸ್ಲಿಂ ಮಹಿಳೆಯರ ಬೆಂಬಲ; ಮೋದಿಗೆ ಧನ್ಯವಾದ..!

ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ ದಿನವಿಡೀ ಚರ್ಚೆ ನಡೆಯಿತು. ಮಸೂದೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಮುಸ್ಲಿಮರ ಹಕ್ಕು ಕಸಿಯುವ ಯತ್ನ ಎಂದು ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ಮಸೂದೆ ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಆಡಳಿತ ಪಕ್ಷವು ಸಮರ್ಥಿಸಿಕೊಂಡಿತು.

ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಗುರುವಾರ ರಾಜ್ಯಸಭೆಯಲ್ಲೂ ಮಂಡನೆಯಾಗಲಿದ್ದು. ಸುದೀರ್ಘ ಚರ್ಚೆಯ ನಡೆಯಲಿದೆ. ರಾಜ್ಯಸಭೆಯಲ್ಲಿ ಒಟ್ಟು 236 ಸದಸ್ಯ ಬಲ ಹೊಂದಿದ್ದು. ಮಸೂದೆ ಅಂಗೀಕಾರಕ್ಕೆ 119 ಮತಗಳು ಬೇಕಿವೆ. ಎನ್​ಡಿಎ ಮೈತ್ರಿಕೋಟದ ಬಳಿ 125 ಸದಸ್ಯರನ್ನು ಹೊಂದಿದ್ದು. ಇಲ್ಲಿಯೂ ಮಸೂದೆಗೆ ಒಪ್ಪಿಗೆ ದೊರಕುವು ನಿರೀಕ್ಷೆ ಇದೆ. ನಂತರ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳ ಅಂಗೀಕಾರದ ನಂತರ ಮಸೂದೆ, ಕಾಯ್ದೆಯಾಗಿ ಅನುಮೋದನೆಯಾಗಲಿದೆ.

Exit mobile version