Site icon PowerTV

ವಿಧಿ ಇಲ್ಲದೆ ನೀರಿನ ಬೆಲೆ ಹೆಚ್ಚಿಗೆ ಮಾಡುತ್ತಿದ್ದೇವೆ ; ಡಿಕೆ ಶಿವಕುಮಾರ್

ಬೆಂಗಳೂರು : ದರ ಏರಿಕೆ ವಿರುದ್ದ ರಾಜ್ಯ ಬಿಜೆಪಿ ಕೈಗೊಂಡಿರುವ ಅಹೋರಾತ್ರಿ ಹೋರಾಟದ ಬಗ್ಗೆ  ಡಿಸಿಎಂ ಡಿಕೆ ಶಿವಕುಮಾರ್​ ಹೇಳಿಕೆ ನೀಡಿದ್ದು. ನೀರಿನ ಬೆಲೆ ಹೆಚ್ಚಿಗೆ ಮಾಡೋ ಅನಿವಾರ್ಯತೆ ಇದೆ, ವಿಧಿ ಇಲ್ಲದೆ ದರ ಹೆಚ್ಚಿಗೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಸದಾಶಿವನಗರದ ನಿವಾಸ ಬಳಿ ಮಾತನಾಡಿದ ಡಿಸಿಎಂ ಡಿಕೆಶಿ ‘ ನಾವು ವಿದ್ಯುತ್​ ಬೆಲೆಯನ್ನು ಕಡಿಮೆ ಮಾಡಿದ್ದೇವೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡಲ್ಲ. ಬಿಜೆಪಿಯವರು ರೈತರ ವಿರೋಧಿಗಳು. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಬೆಲೆ ಕಡಿಮೆ ಇದೆ. ಇವತ್ತು ನೀರಿನ ದರವನ್ನು ಹೆಚ್ಚಳ ಮಾಡುವ ಅನಿವಾರ್ಯತೆ ಇದೆ. ವಿಧಿ ಇಲ್ಲದೆ ನೀರಿನ ದರವನ್ನು ಹೆಚ್ಚಳ ಮಾಡುತ್ತಿದ್ದೇವೆ. ದರವನ್ನು ತುಂಬ ಹೆಚ್ಚು ಮಾಡಲು ಸಾಧ್ಯವಿಲ್ಲ. ಇದರಿಂದ ಬಡವರಿಗೆ ಸಮಸ್ಯೆ ಆಗುತ್ತೆ, ಅದಕ್ಕೆ ಬೋರ್ಡ್ ತೀರ್ಮಾನ ತೆಗೆದುಕೊಳ್ಳುವುದಕ್ಕೆ ತಿಳಿಸಿದ್ದೇನೆ,  ಒಂದು ಸಾವಿರ ಕೋಟಿ ರೂಪಾಯಿ ನೀರಿನಿಂದ ಲಾಸ್ ಆಗ್ತಿದೆ, ಮುಂದಿನ ಫೇಸ್ಗೆ ಅನುಕೂಲವಾಗಲು ನಾವು ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ :ಪೋಷಕರ ನಿರ್ಲಕ್ಷ : ಜ್ಯೂಸ್ ಎಂದು ವಿಷ ಔಷಧ ಸೇವಿಸಿದ ಬಾಲಕಿ ಸಾ*ವು ..!

ಮುಂದುವರಿದು ಮಾತನಾಡಿದ ಡಿಕೆಶಿ ‘ಕಸದ ವಿಚಾರವಾಗಿ ನಾವು ದರ ಏರಿಕೆ ಮಾಡಿಲ್ಲ, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಸೂಚನೆ ಕೊಟ್ಟಿದೆ. 2022ರಲ್ಲೇ ಬಿಜೆಪಿಯವರು ಇದನ್ನು ಚಾಲ್ತಿಗೆ ತಂದಿದ್ದಾರೆ. ಅವರು ದರ ಏರಕೆ ಮಾಡಿರೋದಕ್ಕಿಂತ ನಾನು ಕಡಿಮೆ ಮಾಡಿದ್ದೇನೆ. ನಮಗೂ ಜನರ ನೋವು ನಲಿವು ಅರ್ಥವಾಗುತ್ತೆ, ಬಿಜೆಪಿಯವರು ರಾಜಕಾರಣ ಮಾಡಬೇಕು ಮಾಡುತ್ತಿದ್ದಾರೆ ಎಂದು ಹೇಳಿದರು.

Exit mobile version