Site icon PowerTV

RCB ಇನ್​ಸೈಡ್​ ಶೋನಲ್ಲಿ ಹಾಡು ಹೇಳಿ ಸಂಭ್ರಮಿಸಿದ ದೇವದತ್​ ಪಡಿಕಲ್​..!

ಬೆಂಗಳೂರು : ಆರ್​ಸಿಬಿ ಇನ್​ಸೈಡ್​ ಶೋನಲ್ಲಿ ಈ ಬಾರಿ ದೇವದತ್​ ಪಡಿಕಲ್​ ಹಾಜರಾಗಿದ್ದು. ನಟ, ರೇಡಿಯೋ ಜಾಕಿ ಡ್ಯಾನಿಷ್​ ಸೇಟ್​​ ಅವರೊಂದಿಗಿನ ಸಂದರ್ಶನ ಈ ಬಾರಿ ಸಾಕಷ್ಟು ವೈರಲ್​ ಆಗಿದೆ. ಈ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಪಡಿಕಲ್​ ಸೊಗಸಾಗಿ ಕನ್ನಡ ಮಾತನಾಡಿದ್ದಾರೆ. ಜೊತೆಗೆ ಆರ್​ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ಹಾಡು ಹೇಳುವ ಮೂಲಕ ಸಕತ್​ ಫನ್​ ಮಾಡಿದ್ದಾರೆ.

ಆರ್​​ಸಿಬಿ ಫ್ಯಾನ್ಸ್​ಗಳು ಆರ್​ಸಿಬಿ ಪಂದ್ಯಗಳಿಗೆ ಹೇಗೆ ಕಾಯುತ್ತಾರೋ, ಅದೇ ರೀತಿ ನಟ ಡ್ಯಾನಿಷ್​ ಸೇಠ್​ ನಡೆಸಿ ಕೊಡುವ ಆರ್​ಸಿಬಿ ಇನ್​ಸೈಡ್ ಶೋಗಳಿಗೂ ಹಾಗೆ ಕಾಯುತ್ತಾರೆ. ಈ ಬಾರಿ ಈ ಶೋಗೆ RCB ಆಟಗಾರ ದೇವದತ್​ ಪಡಿಕಲ್​ ಆಗಮಿಸಿದ್ದಾರೆ. ಸಂದರ್ಶನ ಆರಂಭವಾಗುತ್ತಿದ್ದಂತೆ ಕನ್ನಡದಲ್ಲೇ ಪ್ರಶ್ನೆ ಕೇಳಿದ ಡ್ಯಾನಿಷ್​ ‘ಹೇಗಿತ್ತಪ್ಪ ನಾರ್ಥ್‌ ಇಂಡಿಯಾ ಟೂರ್‌’ ಎಂದು ಕೇಳ್ತಾರೆ. ಅದಕ್ಕೆ ಪಡಿಕ್ಕಲ್‌, ‘ತುಂಬಾ ಚೆನ್ನಾಗಿತ್ತು. ಬೆಂಗಳೂರು ನನ್ನ ಮನೆ. ವಾಪಸ್‌ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಕನ್ನಡದಲ್ಲೇ ಹೇಳ್ತಾರೆ.

ಇದನ್ನೂ ಓದಿ :ವಕ್ಫ್​ ಮಸೂದೆ ಮಂಡನೆಗೆ ಮುಸ್ಲಿಂ ಮಹಿಳೆಯರ ಬೆಂಬಲ; ಮೋದಿಗೆ ಧನ್ಯವಾದ..!

ನಂತರ ಡ್ಯಾನೀಶ್​ ಪಡಿಕಲ್​ರನ್ನು ಸ್ಪೈ ರೀತಿಯಾಗಿ ಬೇರೆ ತಂಡಕ್ಕೆ ಕಳುಹಿಸಿದ್ದಾಗಿ ಹೇಳುತ್ತಾ. ಆ ತಂಡಗಳ ಸೀಕ್ರೆಟ್​ ಬಗ್ಗೆ ಕೇಳುತ್ತಾರೆ. ಈ ವೇಳೆ ಲಖ್ನೋ ಬಗ್ಗೆ ತಿಳಿಸಿದ ಪಡಿಕಲ್​ ‘ಲಖ್ನೋ ತಂಡ ಯಾವಗಲೂ ಆಕ್ರಮಣಕಾರಿ ಆಟವಾಡುತ್ತದೆ, ಅದರ ಬಗ್ಗೆ ನಾವು ಗಮನ ಕೊಡಬೇಕು ಎಂದರು. ಈ ವೇಳೆ ಸ್ವಲ್ಪ ಹಾಸ್ಯಸ್ಪದವಾಗಿ ಮಾತನಾಡಿದ ಡ್ಯಾನೀಶ್​ ‘ಮೊದಲು ನೀನು ಯೂತ್‌ಫುಲ್‌ ರೀತಿ ಮಾತಾಡ್ತಿದ್ದೆ. ಈಗ ಹರ್ಷ ಬೋಗ್ಲೆ ಥರ ಮಾತಾಡ್ತಿದ್ದೀಯಾ ಅಂತ ಕೇಳಿದಾಗ, ‘ಮತ್ತೆ ಹೆಂಗೆ ಮಾತಾಡ್ಬೇಕು’ ಅಂತ ಕನ್ನಡದಲ್ಲೇ ಪಡಿಕ್ಕಲ್‌ ಮರುಪ್ರಶ್ನೆ ಹಾಕ್ತಾರೆ. ಸ್ವಲ್ಪ ಜಾಲಿ ಆಗಿರು ಎಂದಾಗ, ‘ನಿಮ್‌ ಹತ್ರ ಜಾಲಿಯಾಗಿರೋಕೆ ಸ್ವಲ್ಪ ಕಷ್ಟ ಇದೆ’ ಅಂತ ಪಡಿಕ್ಕಲ್‌ ಉತ್ತರಿಸುತ್ತಾರೆ.

ಯುಗಾದಿ, ದೀಪಾವಳಿಗೆ ನಾರ್ಮಲ್‌ ಆಗಿ ವಿಶ್‌ ಮಾಡ್ತೀಯಾ. ಅಂತಾರಾಷ್ಟ್ರೀಯ ವಿಶೇಷ ದಿನಗಳಿಗೆ ವಿಶ್‌ ಮಾಡು ಎಂದಾಗ, ‘ವಿಶ್ವ ಕಪ್‌ ಕೇಕ್‌ ದಿನ.. ವಿಶ್ವ ಶೌಚಾಲಯದ ದಿನ.. ವಿಶ್ವ ಮೊಟ್ಟೆ ದಿನ’ಕ್ಕೆ ಕನ್ನಡದಲ್ಲೇ ವಿಶ್‌ ಮಾಡಿ ಪಡಿಕ್ಕಲ್‌ ಗಮನ ಸೆಳೆದಿದ್ದಾರೆ.

ಕೊನೆಯಲ್ಲಿ ಕನ್ನಡದ “ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ” ಎಂಬ ಹಾಡಿಗೆ ತಮ್ಮದೇ ಸಾಹಿತ್ಯ ಸೇರಿಸಿದ ಡ್ಯಾನೀಶ್​ “ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ” ಎಂದು ಹಾಡಲು ಶುರು ಮಾಡಿದರು. ಈ ವೇಳೆ  ಪಡಿಕಲ್​ ಕೂಡ ಹಾಡಿಗೆ ಧನಿ ಗೂಡಿಸಿದರು. ಸಂಧರ್ಶನವಂತು ಸಕತ್​ ಫನ್ನಿಯಾಗಿ ಮುಕ್ತಾಯಗೊಂಡಿತು.

Exit mobile version