Site icon PowerTV

ಕಾಂಗ್ರೆಸ್​ ನ್ಯಾಯಯುತವಾಗಿ ಬೆಲೆ ಏರಿಕೆ ಮಾಡಿದೆ: ಆರ್​.ವಿ ದೇಶಪಾಂಡೆ

ಬೆಂಗಳೂರು : ಬೆಲೆ ಏರಿಕೆಗೆ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಶಾಸಕ ಆರ್​.ವಿ ದೇಶಪಾಂಡೆ, ಸರ್ಕಾರದ ನೀತಿಯನ್ನು ಸಮರ್ಥಿಸಿಕೊಂಡಿದ್ದು. ಕಾಂಗ್ರೆಸ್​ ಸರ್ಕಾರ ನ್ಯಾಯಯುತವಾಗಿ ಬೆಲೆ ಏರಿಕೆ ಮಾಡಿದೆ. ಅರ್ಥಶಾಸ್ತ್ರ ಅರ್ಥ ಮಾಡಿಕೊಂಡವರು ಬೆಲೆ ಏರಿಕೆಗೆ ವಿರೋದ ಮಾಡಲ್ಲ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್​ ಸರ್ಕಾರದ ಬೆಲೆ ಏರಿಕೆಗೆ ಬಿಜೆಪಿ ಆಹೋರಾತ್ರಿ ಧರಣಿ ಕೈಗೊಂಡಿದ್ದು. ಈ ವಿಚಾರದ ಕುರಿತು ಮಾತನಾಡಿದ ಶಾಸಕ ಆರ್​.ವಿ ದೇಶಪಾಂಡೆ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು. ‘ಬೆಲೆ ಏರಿಕೆ ವಿರುದ್ದ ಬಿಜೆಪಿ ಪ್ರತಿಭಟನೆ ಮಾಡೋದು ಹೊಸದೇನಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ದರ ಹೆಚ್ಚಾಗಿದೆ. ಹಾಲು, ಪೆಟ್ರೋಲ್, ಡೀಸೆಲ್ ಎಲ್ಲವೂ ಹೆಚ್ಚು ಮಾಡಿದ್ದಾರೆ. ಸರ್ಕಾರ ಬೆಲೆ ಏರಿಕೆ ಸ್ವಲ್ಪ ಮಾಡಿದೆ ನಿಜ. ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸೋದು ಕೇಂದ್ರ ಸರ್ಕಾರ.

ಇದನ್ನೂ ಓದಿ :ಮೂರು ಯುವಕರ ಜೊತೆ ಯುವತಿ ಲವ್ವಿ-ಡವ್ವಿ; ಇದು ವೈಯಾರಿ ವೈಷ್ಣವಿಯ ಕಥೆ..!

ಕೆಲವೊಮ್ಮೆ ದರ ಹೆಚ್ಚಳ ಅನಿವಾರ್ಯವಾಗುತ್ತದೆ. ಅರ್ಥಶಾಸ್ತ್ರ ಅರ್ಥ ಮಾಡಿಕೊಂಡವರು ಬೆಲೆ ಏರಿಕೆ ಕುರಿತು  ವಿರೋಧಿಸಲ್ಲ. ಬಿಜೆಪಿ ಬೀದಿಗೆ ಹೋಗಲಿ, ಮನೆಗೆ ಹೋಗಲಿ. ಕಾಂಗ್ರೆಸ್ ನ್ಯಾಯಯುತವಾಗಿ ಬೆಲೆ ಏರಿಕೆ ಮಾಡಿದೆ. ಕಾಂಗ್ರೆಸ್​ ಸರ್ಕಾರ ರಾಜ್ಯದ ಬಡವರು ಮತ್ತು ಯುವಕರ ಪರವಾಗಿದೆ ಎಂದು ಹೇಳಿದರು.

ಹನಿಟ್ರ್ಯಾಪ್​ ಕುರಿತು ಚರ್ಚೆ ಅವಶ್ಯಕತೆ ಇರಲಿಲ್ಲ..!

ಹನಿಟ್ರ್ಯಾಪ್​ ಕುರಿತು ಮಾತನಾಡಿದ ಆರ್​.ವಿ ದೇಶಪಾಂಡೆ ‘ಸದನದಲ್ಲಿ ಹನಿಟ್ರ್ಯಾಪ್​ ಕುರಿತು ಚರ್ಚೆ ಮಾಡುವಾಗ ನಾನು ಸದನದಲ್ಲಿದ್ದೆ, ಆದರೆ ಸದನದಲ್ಲಿ ಈ ಚರ್ಚೆಯ ಅವಶ್ಯಕತೆ ಇರಲಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಇರಲಿ ಅಥವಾ ಬಿಜೆಪಿ ಇರಲಿ ತಪ್ಪು, ತಪ್ಪೇ. ಇಂತಹ ವೈಯಕ್ತಿಕ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡೋದು ಸರಿಯಲ್ಲ. ಈ ವಿಚಾರದ ಕುರಿತು ಸಿಎಂ ಗಮನ ಕೊಡಬೇಕು ಎಂದು ಹೇಳಿದರು.

 

Exit mobile version