Site icon PowerTV

ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಕೋಳಿಗಳನ್ನು ದುಪ್ಪಟ್ಟು ಹಣ ಕೊಟ್ಟು ಖರೀದಿಸಿದ ಅನಂತ್ ಅಂಬಾನಿ

ಮುಂಬೈ: ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಮಗ ಅನಂತ್​ ಅಂಭಾನಿ ತಮ್ಮ 30 ವರ್ಷದ ಹುಟ್ಟುಹಬ್ಬದ ಅಂಗವಾಗಿ ಜಾಮ್​ ನಗರದಿಂದ ದ್ವಾರಕಕ್ಕೆ ಪಾದಯಾತ್ರೆ ನಡೆಸುತ್ತಿದ್ದು. ಈ ವೇಳೆ ಮಾರಾಟಕ್ಕೆ ಎಂದು ಕೊಡ್ಡೊಯ್ಯುತ್ತಿದ್ದ ನೂರಾರು ಕೋಳಿಗಳನ್ನು ಖರೀದಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಹೌದು.. ಪ್ರಾಣಿ-ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಅನಂತ್​ ಅಂಭಾನಿ ತಮ್ಮದೇ ಆದ ಖಾಸಗಿ ಮೃಗಾಲಯವನ್ನು ಹೊಂದಿದ್ದಾರೆ. ಇದಕ್ಕೆ ಸಾಕ್ಷಿಯಾಗುವಂತ ಮತ್ತೊಂದು ಘಟನೆ ನಡೆದಿದ್ದು. ತಮ್ಮ 30ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅನಂತ್​ ದ್ವಾರಕಕ್ಕೆ ಪಾದಯಾತ್ರೆ ನಡೆಸುತ್ತಿದ್ದು. ಈ ವೇಳೆ ಹತ್ಯೆ ಮಾಡಲು ಎಂದು ಕೊಂಡೊಯ್ಯುತ್ತಿದ್ದ ವಾಹನವನ್ನು ತಡೆದ ಅನಂತ್​ ಅಂಭಾನಿ ಆ ಕೋಳಿಗಳನ್ನು ದುಪ್ಪಟ್ಟು ಹಣ ಕೊಟ್ಟು ಖರೀದಿಸಿದ್ದಾರೆ.

ಇದನ್ನೂ ಓದಿ :ಹಿರಿಯ ನಟ ಸುದರ್ಶನ್​ ಪತ್ನಿ ಶೈಲಶ್ರೀ ಸುದರ್ಶನ್ ಬದುಕಲ್ಲಿ ಬೆಳಕಾದ ನಟ ದರ್ಶನ್​..!

ಕೋಳಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆಗಟ್ಟಿದ ಅನಂತ್​ ಅಂಭಾನಿ, ಕೋಳಿ ಮಾಲೀಕರು ಮತ್ತು ವಾಹನದ ಚಾಲಕನ ಜೊತೆ ಮಾತುಕತೆ ನಡೆಸಿದ್ದಾರೆ. ಕೋಳಿಗಳ ಬೆಲೆಗಿಂತ ಎರಡು ಪಟ್ಟು ಬೆಲೆ ನೀಡಿ ಸುಮಾರು 200 ಕೋಳಿಗಳನ್ನು ರಕ್ಷಿಸಿದ್ದಾರೆ.

ಬಳಿಕ ಒಂದು ಕೋಳಿಯನ್ನು ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಿರುವುದು ವಿಡಿಯೋದಲ್ಲಿದೆ. ಪಾದಯಾತ್ರೆಯ ವೇಳೆ ಕೋಳಿಗಳನ್ನು ರಕ್ಷಿಸಿರುವುದು ಅವರ ಪ್ರಾಣಿಗಳ ಮೇಲಿನ ಪ್ರೀತಿಯಾಗಿದೆ ಎಂದು ಟ್ವಿಟಿಗರು ಕೊಂಡಾಡುತ್ತಿದ್ದಾರೆ.

Exit mobile version