Site icon PowerTV

ನಾವು ಮುಸ್ಲಿಮರ ವಿರೋಧಿಗಳಲ್ಲ, ಸರ್ಕಾರ ಎಲ್ಲರನ್ನು ಸಮಾನವಾಗಿ ಕಾಣಬೇಕು : ಯಡಿಯೂರಪ್ಪ

ಬೆಂಗಳೂರು : ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಬೆಂಗಳೂರಲ್ಲಿ ಅಹೋರಾತ್ರಿ ಧರಣಿ ವಿಚಾರದ ಕುರಿತು ಹೇಳಿಕೆ ನೀಡಿದ್ದು. ಸರ್ಕಾರ ಮುಸ್ಲಿಮರಿಗೆ 4% ಮೀಸಲಾತಿ ನೀಡಿದೆ, ಉಳಿದ ಹಿಂದುಗಳು ಏನು ದ್ರೋಹ ಮಾಡಿದ್ದಾರೆ. ನಾವು ಮುಸ್ಲಿಮರ ವಿರೋಧಿಗಳಲ್ಲ. ಆದರೆ ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿದರು.

ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಅಹೋರಾತ್ರಿ ಧರಣಿ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು. ‘ ಕಾಂಗ್ರೆಸ್​ ಪಕ್ಷಕ್ಕೆ ಜನರು ಅಜೀರ್ಣ ಆಗುವಷ್ಟು ಬಹಿಮತ ನೀಡಿದ್ದಾರೆ. ಆದರೂ ಸರ್ಕಾರ ತುಘಲಕ್​ ದರ್ಬಾರ್​ ನಡೆಸುತ್ತಿದೆ. ಈ ಆಡಳಿತದಲ್ಲಿ ಜನರು ಜೀವಿಸಲು ಸಾಧ್ಯವಿಲ್ಲದ ಪರಿಸ್ಥಿಯನ್ನು ಸರ್ಕಾರ ನಿರ್ಮಿಸಿದೆ. ಕಾಂಗ್ರೆಸ್​ ಸರ್ಕಾರ ಮುಸಲ್ಮಾನರಿಗೆ 4% ಮೀಸಲಾತಿ ಕೊಟ್ಟಿದ್ದಾರೆ.  ಉಳಿದ ಹಿಂದೂಗಳು ಏನು ದ್ರೋಹ ಮಾಡಿದ್ದಾರೆ ?, ನಾವು ಮುಸ್ಲಿಮರ ವಿರೋಧಿಗಳಲ್ಲ, ಆದರೆ ಎಲ್ಲರನ್ನೂ ಸರಿ ಸಮನಾಗಿ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ.

ಇದನ್ನೂ ಓದಿ :ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ RCB ಮ್ಯಾಚ್​; ಮೆಟ್ರೋ ಸೇವೆ ಮಧ್ಯರಾತ್ರಿವರೆಗೆ ವಿಸ್ತರಣೆ

ಹಾಲು, ವಿದ್ಯುತ್, ಮೆಟ್ರೋ, ನೋಂದಣಿ ವೆಚ್ಚ ಸೇರಿ ಎಲ್ಲಾ ದರ ಏರಿಕೆ ಮಾಡಿದ್ದಾರೆ. ದಿನಬಳಕೆಯ ವಸ್ತುಗಳನ್ನು ಕಾಂಗ್ರೆಸ್ ಸರ್ಕಾರ ಏರಿಸಿ ಜನರನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಬೆಲೆ ಏರಿಕೆ ಹಿಂಪಡೆಯಬೇಕು ಅಂತಾ ನಾವು ನಾಳೆ ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ. ನಾನೂ ಕೂಡಾ ಧರಣಿಯಲ್ಲಿ ಭಾಗವಹಿಸುತ್ತಿದ್ದೇನೆ. ಯಾರ್ಯಾರು ನೋವು ಅನುಭವಿಸುತ್ತಿದ್ದಾರೋ ಎಲ್ಲರೂ ಪಕ್ಷ ಬೇಧ ಮರೆತು ಬಂದು ಭಾಗವಹಿಸಿ ಎಂದು ಕರೆ ನೀಡಿದರು.

ಮುಂದುವರಿದು ಮಾತನಾಡಿದ ಮಾಜಿ ಸಿಎಂ ‘ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅವರಿಗೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದೇ ಮುಖ್ಯ. ನಮ್ಮ ಹೋರಾಟ ಇನ್ನೂ ಅನೇಕ ದಿನ ನಡೆಯುವುದಿದೆ. ಜೆಡಿಎಸ್​ನವರು ಅವರದ್ದೇ ಆದ ಬೇರೆ ಕಾರಣಕ್ಕೋಸ್ಕರ ಹೋರಾಟದಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದರು.

Exit mobile version