Site icon PowerTV

ತಾಯ್ನಾಡಿಗೆ ವಾಪಸ್ ಬರುವ ಭರವಸೆ ಇದೆ; ಸುನೀತಾ ವಿಲಿಯಮ್ಸ್ ಮೊದಲ ಪ್ರತಿಕ್ರಿಯೆ

ದೆಹಲಿ : ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್​​ ಬಾಹ್ಯಾಕಾಶದಿಂದ ಮರಳಿದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದು. ಭಾರತವನ್ನು ಹೊಗಳಿ ಕೊಂಡಾಡಿದ್ದಾರೆ. ಜೊತೆಗೆ ಭಾರತಕ್ಕೆ ವಾಪಾಸು ಬರುವ ಭರವಸೆ ಇದೆ ಎಂದು ಭಾರತಕ್ಕೆ ಮರಳುವ ಆಸಕ್ತಿ ತೋರಿಸಿದ್ದಾರೆ.

ಕಳೆದ 9 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಸುನೀತ ವಿಲಿಯಮ್ಸ್​ ಕಳೆದ ವಾರವಷ್ಟೇ ಭೂಮಿಗೆ ಮರಳಿದ್ದರು. ಭೂಮಿಗೆ ಮರಳಿದಾಗಿನಿಂದ ನಾಸಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀತಾ ವಿಲಿಯಮ್ಸ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಸುನೀತ ಭಾರತವನ್ನು ಹಾಡಿ ಹೊಗಳಿದ್ದಾರೆ. ಭಾರತದ ಕುರಿತು ಮಾತನಾಡಿರುವ ಸುನೀತಾ “ಭಾರತ ಅದ್ಬುತ ದೇಶ, ಭಾರತ ಶ್ರೇಷ್ಠ ದೇಶ, ಭಾರತ ಅದ್ಭುತವಾದ ಪ್ರಜಾಪ್ರಭುತ್ವ ದೇಶ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ :ಒಂದು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡಿದ ಟೀಚರಮ್ಮನ ಸ್ಟೋರಿ..!

ಮುಂದುವರಿದು ಮಾತನಾಡಿರುವ ಸುನೀತಾ ‘ಪ್ರತಿ ಭಾರಿಯೂ ಹಿಮಾಲಯಕ್ಕೆ ಹೋದಾಗ, ನಂಬಲಸಾಧ್ಯವಾದ ಪೋಟೋಗಳನ್ನು ತೆಗೆದಿದ್ದೇವೆ, ಬಾಹ್ಯಾಕಾಶದಿಂದ ಬಣ್ಣ ಬಣ್ಣದಿಂದ ಭಾರತ ಕಾಣುತ್ತಿದೆ, ಗುಜರಾತ್, ಮುಂಬೈನ ಭೂ ಪ್ರದೇಶ ಬಾಹ್ಯಾಕಾಶದಿಂದ ಕಂಡಿದೆ, ನನ್ನ ತಂದೆಯ ತಾಯ್ನಾಡಿಗೆ ನಾನು ವಾಪಸ್ ಬರುವ ಭರವಸೆ ಇದೆ ಎಂದು ಭಾರತಕ್ಕೆ ಮರಳು ಆಸಕ್ತಿ ತೋರಿಸಿದ್ದಾರೆ.

ಜೊತೆಗೆ ಭಾರತದ ಬಾಹ್ಯಕಾಶ ಯಾತ್ರೆಯ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿ ಹೇಳಿರುವ ಸುನೀತಾ ವಿಲಿಯಮ್ಸ್​ ‘ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಎಕ್ಸಿಂ ಮಿಷನ್ ನಲ್ಲಿ ಬಾಹ್ಯಾಕಾಶಕ್ಕೆ ಹೋಗುವುದನ್ನು ನೋಡಲು ಕುತೂಹಲ ಕಣ್ಣಿಂದ ಕಾಣುತ್ತಿದ್ದೇನೆ ಎಂದಿದ್ದಾರೆ.

ಬಾಹ್ಯಾಕಾಶದಿಂದ ವಿಳಂಬವಾಗಿ ಭೂಮಿಗೆ ಆಗಮಿಸಿದ ಕುರಿತು ಮಾತನಾಡಿರುವ ಸುನೀತಾ ‘ತಾವು ಬಾಹ್ಯಾಕಾಶ ನಿಲ್ದಾಣದಿಂದ ವಿಳಂಬವಾಗಿ ಬಂದಿದ್ದಕ್ಕೆ ಎಲ್ಲರೂ ಹೊಣೆ, ಬೋಯಿಂಗ್, ನಾಸಾ ಹಾಗೂ ನಾವು ಕೂಡ ಹೊಣೆ ಹೊರುತ್ತೇವೆ. ಜೊತೆಗೆ ಎಲಾನ್​​ ಮಸ್ಕ್​ಗೆ ಸುನೀತಾ ಧನ್ಯವಾದ ತಿಳಿಸಿದ್ದಾರೆ.

Exit mobile version