Site icon PowerTV

2028ಕ್ಕೆ ನಾನೇ ಸಿಎಂ, ಗೋಮಾತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತೀನಿ; ಯತ್ನಾಳ್​

ವಿಜಯಪುರ : ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಜಿಲ್ಲೆಯಲ್ಲಿ ಮಾಧ್ಯಮ ಹೇಳಿಕೆ ನೀಡಿದ್ದು. 2028ಕ್ಕೆ ನಾನೇ ಸಿಎಂ ಆಗ್ತೀನಿ ಎಂದು ಹೇಳಿದ್ದು. ಸಿಎಂ ಆಗಿ ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತೀನಿ ಎಂದಿದ್ದಾರೆ.

ಈಗಾಗಲೇ ಹೊಸ ಪಕ್ಷ ಕಟ್ಟುತ್ತೇನೆ ಎಂದಿರುವ ಯತ್ನಾಳ್​ ಇದೀಗ 2028ಕ್ಕೆ ಸಿಎಂ ಆಗ್ತೀನಿ ಎಂದಿದ್ದಾರೆ.  ಈ ಕುರಿತು ಮಾತನಾಡಿರುವ ಶಾಸಕ ಯತ್ನಾಳ್​ ‘2028ಕ್ಕೆ ಸಿಎಂ ನಾನೇ ಆಗ್ತೀನಿ. ಇವತ್ತೆ ಹೆಡಲೈನ್ ಬರೆದು ಇಟ್ಟುಕೊಳ್ಳಿ. ಹಿಂದುತ್ವ ಗೋಮಾತೇ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡ್ತೇನೆ. ಇಂದು ವಿಜಯೆಂದ್ರ ಪರ ಕೆಲ ಮಾಧ್ಯಮಗಳು ಕೆಲಸ ಮಾಡುತ್ತೇವೆ. ಅಂತಹ ಮಾಧ್ಯಮಗಳು ಸಹ ಮುಂದೆ ನನ್ನ ಬಗ್ಗೆ ಬರೆಯುತ್ತವೆ. ನಾನು ಸಿಎಂ ಆಗೇ ಆಗ್ತೀನಿ.

ಇದನ್ನೂ ಓದಿ :ಕಣ್ಣು ಕಾಣದ ಬಡ ಮಗುವಿನ ಬಾಳಿಗೆ ಬೆಳಕಾದ ಧ್ರುವ ಸರ್ಜಾ..!

ಯಡಿಯೂರಪ್ಪ ಅವಧಿಯಲ್ಲಿ ನಾನು ಸಚಿವ ಆಗಲಿಲ್ಲ. ಭ್ರಷ್ಟನ ಕೈಕೆಳಗೆ ಕೆಲಸ ಮಾಡಬಾರದು ಅನ್ನೋ ಕಾರಣಕ್ಕೆ ಮಂತ್ರಿ ಆಗಲಿಲ್ಲ. ಹಿಂದೆ ಬೊಮ್ಮಾಯಿ  ಮುಖ್ಯಮಂತ್ರಿ ಆಗಿ ಅಂದ್ರು ನಾನು ಅಭಿವೃದ್ಧಿಗೆ ಹಣ ಕೊಡಿ ಮಂತ್ರಿಗಿರಿ ಬೇಡ ಅಂದೆ. ನನಗೆ ಕಾರ್ ಮೇಲೆ ಕೆಂಪು ಗೂಟ ಹಾಕಿಕೊಂಡು ಅಡ್ಡಾಡೋ ಶೋಕಿ ಇಲ್ಲ ಎಂದು ಹೇಳಿದರು.

Exit mobile version