Site icon PowerTV

ಯುಗಾದಿ ಸಂಭ್ರಮದಲಿದ್ದ ಮನೆಯಲ್ಲಿ ಸೂತಕದ ಛಾಯೆ; ಮೂವರು ಸಾ*ವು..!

ಮೈಸೂರು : ಯುಗಾದಿ ಹಬ್ಬಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಹಬ್ಬದ ಹಿನ್ನಲೆ ಹಸು ತೊಳೆಯಲು ಎಂದು ಕೆರೆಗೆ ಹೋಗಿದ್ದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ, ನಂಜನಗೂಡು ತಾಲ್ಲೂಕಿನ, ಕಾಮಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಗ್ರಾಮದ 48 ವರ್ಷದ ಮುದ್ದೇಗೌಡ, 45 ವರ್ಷದ ಬಸವೇಗೌಡ, 17 ವರ್ಷದ ವಿನೋದ್​ ಮೂವರು ಹಸುವಿಗೆ ಸ್ನಾನ ಮಾಡಸಲು ಎಂದು ಗ್ರಾಮದ ಕೆರೆಗೆ ಹೋಗಿದ್ದನು. ಈ ವೇಳೆ ವಿನೋದ್​ನನ್ನು ಹಸು ಕರೆಯೊಳಗೆ ಎಳೆದೊಯ್ದಿದೆ. ವಿನೋದ್​ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಮುದ್ದೇಗೌಡ ಮತ್ತು ಬಸವೇಗೌಡ ನೀರಿಗೆ ಜಿಗಿದ್ದಾರೆ.

ಇದನ್ನೂ ಓದಿ :ತಂದೆಯ ಸಾವಿನ ನೋವಿನಲ್ಲೂ SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ

ಈ ವೇಳೆ ಮೂವರು ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿದ್ದ ಜನರಿಗೆ ಸೂತಕದ ಛಾಯೆ ಆವರಿಸಿದೆ.

Exit mobile version