Site icon PowerTV

ನಿಮ್ಮ ತಾಯಿ-ತಂಗಿಯ ವಿಡಿಯೋ ನೋಡಿ ಖುಷಿಪಡಿ; ತಮಿಳು ನಟಿ ಶೃತಿ ಖಡಕ್​ ಪ್ರತಿಕ್ರಿಯೆ

ತಮಿಳು ನಟಿ ಶೃತಿ ನಾರಾಯಣನ್​ ಅವರದ್ದು ಎನ್ನಲಾದ ಖಾಸಗಿ ವಿಡಿಯೋಗಳು ಸೋಶಿಯಲ್ ಮಿಡೀಯಾದಲ್ಲಿ ವೈರಲ್​ ಆದ ಬೆನ್ನಲ್ಲೇ ನಟಿ ಶೃತಿ ನಾರಾಯಣ್​ ಈ ಕುರಿತು ರಿಯಾಕ್ಟ್​ ಮಾಡಿದ್ದು. ನಿಮ್ಮ ತಾಯಿ, ತಂಗಿ ಕೂಡ ನನ್ನ ಹಾಗೆಯೇ ದೇಹವನ್ನು ಹೊಂದಿದ್ದಾರೆ ಅವರ ವಿಡಿಯೋ ನೋಡಿ ಖುಷಿಪಡಿ ಎಂದು ಹೇಳಿದ್ದಾರೆ.
ಹೌದು.. ನಿನ್ನೆಯಿಂದ ತಮಿಳು ನಟಿ ಶೃತಿ ನಾರಯಣ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತಿದೆ. ಈ ಕುರಿತು ನಟಿ ಖಡಕ್​ ಆಗಿಯೇ ಪ್ರತಿಕ್ರಿಯೆ ನೀಡಿದ್ದು. ‘ಇದೀಗ ಹರಿದಾಡುತ್ತಿರುವ ವಿಚಾರ ನಿಮಗೆ ಜೋಕ್ ಅಥವಾ ತಮಾಷೆ ಆಗಿರಬಹುದು. ಆದರೆ ನನಗೆ ನನ್ನ ಕುಟುಂಬಕ್ಕೆ ಇದು ಕಷ್ಟಕರ ಸಂದರ್ಭವಾಗಿದೆ. ಅದರಲ್ಲೂ ನನಗೆ ಇದನ್ನು ನಿಭಾಯಿಸೋದು ಕಷ್ಟಕರವಾಗಿದೆ ಎಂದಿದ್ದಾರೆ.
ನಾನು ಒಬ್ಬಳು ಹುಡುಗಿ, ನನಗೂ ಭಾವನೆಗಳಿವೆ. ನನ್ನ ಆಪ್ತರಿಗೂ ಭಾವನೆಗಳಿವೆ. ಅದಕ್ಕೆ ಬೆಲೆ ಕೊಡಿ. ನೀವೆಲ್ಲಾ ಇದನ್ನು ಮತ್ತಷ್ಟು ಕೆಟ್ಟದಾಗಿ ಮಾಡುತ್ತಿದ್ದೀರಿ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಬರೆದುಕೊಂಡಿದ್ದಾರೆ ನಟಿ ‘ದಯವಿಟ್ಟು ಆ ವಿಡಿಯೋಗಳನ್ನು ಕಾಡ್ಗಿಚ್ಚಿನಂತೆ ಹಬ್ಬಿಸಬೇಡಿ. ಒಂದು ವೇಳೆ ನೀವು ಹಾಗೆಯೇ ಮಾಡಬೇಕು ಎಂದಿದ್ರೆ, ನಿಮ್ಮ ತಾಯಿ, ಗರ್ಲ್‌ಫ್ರೆಂಡ್, ಸಹೋದರಿ ವಿಡಿಯೋಗಳನ್ನು ವೈರಲ್ ಮಾಡಿ. ಅವರು ಕೂಡ ನನ್ನ ಹಾಗೆಯೇ ದೇಹವನ್ನು ಹೊಂದಿದ್ದಾರೆ. ಹಾಗಾಗಿ ಅವರ ವಿಡಿಯೋ ನೋಡಿ ಖುಷಿಪಡಿ ಎಂದು ಖಡಕ್ ಆಗಿ ಶೃತಿ ನಾರಾಯಣನ್ ಇನ್ಸ್ಟಾಗ್ರಾಂ ಸ್ಟೋರಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಯತ್ನಾಳ್ ಕಾಂಗ್ರೆಸ್​ ಪಕ್ಷಕ್ಕೆ ಬಂದರೆ ಕರೆದುಕೊಳ್ಳುತ್ತೇವೆ..!

ಲೀಕ್ ಆದ ಕೌಸ್ಟಿಂಗ್ ಕೌಚ್ ವಿಡಿಯೋವನ್ನು ನಟಿ ಎಐ ವಿಡಿಯೋ ಎಂದು ಪರೋಕ್ಷವಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದು ರಿಯಲ್ ವಿಡಿಯೋ ಅಲ್ಲ, ಎಂಬುದು ನಟಿಯ ವಾದ. ಇನ್ನೂ ಪ್ರೈವೇಟ್ ಮಾಡಿದ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಮತ್ತೆ ಪಬ್ಲಿಕ್ ಮಾಡಿದ್ದಾರೆ. ಕಾಮೆಂಟ್ ಬಾಕ್ಸ್ ಆಫ್ ಮಾಡಿ ಹೊಸ ಫೋಟೋಶೂಟ್ ಕೂಡ ಹಂಚಿಕೊಂಡಿದ್ದಾರೆ.

ಇನ್ನೂ ಲೀಕ್ ಆಗಿರುವ ಶೃತಿ ಖಾಸಗಿ ವಿಡಿಯೋ ಕಾಸ್ಟಿಂಗ್ ಕೌಚ್ ದೃಶ್ಯಗಳು ಎನ್ನಲಾಗಿದೆ. 14 ನಿಮಿಷಗಳಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಸ್ಟಿಂಗ್ ಕೌಚ್ ವೇಳೆ, ಅದನ್ನು ರೆಕಾರ್ಡ್ ಮಾಡಿಕೊಂಡು ಲೀಕ್ ಮಾಡಿದ್ದಾರೆ ಎಂದು ನೆಟ್ಟಿಗರು ವಾದಿಸುತ್ತಿದ್ದಾರೆ.

Exit mobile version