Site icon PowerTV

ಅಭಿವೃದ್ದಿಯಲ್ಲಿ ಭಾರತವನ್ನು ಸೋಲಿಸದಿದ್ದರೆ ನನ್ನ ಹೆಸರನ್ನು ಬದಲಾಯಿಸುತ್ತೇನೆ : ಪಾಕ್​ ಪ್ರಧಾನಿ

ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾದ್ ಷರೀಫ್​ ಪ್ರತಿಜ್ಞೆಯೊಂದನ್ನು ಮಾಡಿದ್ದು. ಆರ್ಥಿಕತೆ ಮತ್ತು ಅಭಿವೃದ್ದಿಯ ವಿಷಯದಲ್ಲಿ ಭಾರತವನ್ನು ಸೋಲಿಸದಿದ್ದರೆ ನನ್ನ ಹೆಸರು ಶೆಹಬಾಜ್​ ಷರೀಫೇ ಅಲ್ಲ ಎಂದು ಸವಾಲು ಹಾಕಿದ್ದಾರೆ

ಸ್ವಾತಂತ್ರ್ಯ ನಂತರ ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗಿರುವ ಪಾಕಿಸ್ತಾನಕ್ಕೆ ಸದಾ ಭಾರತದ ಕನವರಿಕೆತಯ ಇರುತ್ತದೆ. ಭಾರತದ ಮೇಲೆ ಮೂರು ಭಾರಿ ಯುದ್ದ ಮಾಡಿ ಏಟು ತಿಂದಿರುವ ಪಾಕ್​ ತಿನ್ನುವ ಅನ್ನಕ್ಕೂ ವಿದೇಶಗಳ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದೆ. ಇವೆಲ್ಲದರ ನಡುವೆ ಇದೀಗ ರ‍್ಯಾಲಿಯೊಂದರಲ್ಲಿ ಮಾತನಾಡಿರುವ ಪಾಕ್​ ಪ್ರಧಾನಿ ಶಹಬಾಕ್ ಷರೀಫ್​ ಈ ರೀತಿಯ ಪ್ರತಿಜ್ಞೆಯನ್ನು ಕೈಗೊಂಡಿದ್ದಾರೆ.

ತಮ್ಮ ಸರ್ಕಾರ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿದೆ. ಪಾಕಿಸ್ತಾನದ ಪರಿಸ್ಥಿತಿ ಸುಧಾರಿಸಲು ನಾವು ಹಗಲಿರುಳು ಕೆಲಸ ಮಾಡುತ್ತೇವೆ. ಸರ್ವಶಕ್ತನು ಯಾವಾಗಲೂ ಪಾಕಿಸ್ತಾನವನ್ನು ಆಶೀರ್ವದಿಸಿದ್ದಾನೆ. ಅಭಿವೃದ್ಧಿ ಮತ್ತು ಪ್ರಗತಿಯ ವಿಷಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸದಿದ್ದರೆ ನನ್ನ ಹೆಸರನ್ನೇ ಬದಲಾಯಿಸುತ್ತೇನೆಂದು ತಿಳಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಪಾಕ್​ ಹಣ ದುಬ್ಬರ, ಆರ್ಥಿಕ ಹಿಂಜರಿತ, ಭಯೋತ್ಪಾದನೆ, ನಿರುದ್ಯೋಗ ಸೇರಿ ಅನೇಕ ಖಾಯಿಲೆಗಳಿಂದ ನರಳುತ್ತಿದೆ. ಇದರ ನಡುವೆ ವಿಶ್ವ ಬ್ಯಾಂಕ್​ ಅನೇಕ ದೇಶಗಳಿಂದ ಭಿಕ್ಷೆ ತಂದು ದೇಶದ ಜನರನ್ನು ಸಲಹುತ್ತಿದೆ. ಇದರ ನಡುವೆ ಪಾಕ್​ ಪ್ರಧಾನಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

Exit mobile version