Site icon PowerTV

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜ್ಯೋಗತಿ ಮಂಜಮ್ಮನ ಮನೆಗೆ ಭೇಟಿ ನೀಡಿದ ಮೇಘಾಲಯ ರಾಜ್ಯಪಾಲರು

ಬಳ್ಳಾರಿ : ಮೇಘಾಲಯದ ರಾಜ್ಯಪಾಲ ವಿಜಯ್ ಶಂಕರ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜ್ಯೋಗತಿ ಮಂಜಮ್ಮ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ತೃತೀಯ ಲಿಂಗಿಗಳು ನೃತ್ಯ ಮಾಡುವ ಮೂಲಕ ರಾಜ್ಯಪಾಲರನ್ನು ಸ್ವಾಗತಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯಲ್ಲಿರೋ ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಮನೆಗೆ ಮೇಘಾಲಯ ರಾಜ್ಯಪಾಲ ವಿಜಯ್ ಶಂಕರ್ ಮನಿಗೆ ಭೇಟಿ ನೀಡಿದ್ದಾರೆ. ಜೋಗತಿ ಮಂಜಮ್ಮ ಮನೆಗೆ ಬಂದ ರಾಜ್ಯಪಾಲರಿಗೆ ಜ್ಯೋಗತಿ ನೃತ್ಯ ಮಾಡುವ ಮೂಲಕ ತೃತಿಯ ಲಿಂಗಿಗಳು ಸ್ವಾಗತಿಸಿದರು. ಈ ವೇಳೆ ಜ್ಯೋಗತಿ ಮಂಜಮ್ಮ ಅವರಯ ರಂಗಭೂಮಿಯಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಎಂದ ಅವರು ಮಂಜಮ್ಮ ಅವರಿಗೆ ಹರಿದು ಬಂದ ಪ್ರಶಸ್ತಿಗಳನ್ನ ನೋಡಿ ಖುಷಿಪಟ್ಟರು.

ಇದನ್ನೂ ಓದಿ :ದೂರು ನೀಡಲು ಬಂದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಕಾನ್​ಸ್ಟೇಬಲ್​ !

ಜ್ಯೋಗತಿ ಮಂಜಮ್ಮ ಖ್ಯಾತ ರಂಗಭೂಮಿ ಕಲಾವಿದೆಯಾಗಿದ್ದು. ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತೃತೀಯ ಲಿಂಗಿಯಾಗಿ ರಾಜ್ಯದ ಹಲವು ಕಡೆ ಬೀದಿ ನಾಟಕಗಳನ್ನು ಮಾಡಿರುವ ಇವರಿಗೆ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

Exit mobile version