Site icon PowerTV

ತೇಜಸ್​​ ಯುದ್ದವಿಮಾನ ಪೂರೈಕೆಯಲ್ಲಿ ವಿಳಂಬ: ತನಿಖೆಗೆ ಆದೇಶಿಸಿದ ರಕ್ಷಣಾ ಇಲಾಖೆ

ದೆಹಲಿ : ವಾಯುಪಡೆಗೆ ತೇಜಸ್​ ಯುದ್ದ ವಿಮಾನ ಪೂರೈಕೆಯಲ್ಲಿ ವಿಳಂಭವಾದ ಹಿನ್ನಲೆ ರಕ್ಷಣಾ ಇಲಾಖೆ ಇದರ ಕುರಿತು ತನಿಖೆಗೆ ಆದೇಶಿಸಿದ್ದು. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಆದೇಶಿಸಿದೆ.

ಹೌದು.. ಭಾರತದ ರಕ್ಷಣ ಇಲಾಖೆ ಸ್ವಾವಲಂಬನೆ ಸಾಧಿಸಲು ಕಳೆದ ಕೆಲ ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೂ ಕೂಡ ಭಾರತ ಇಂದಿಗೂ ಕೂಡ ರಕ್ಷಣ ಸಾಧನಗಳಿಗಾಗಿ ಅಮೇರಿಕಾ, ಫ್ರಾನ್ಸ್​, ರಷ್ಯಾಗಳ ಮೇಲೆ ಅವಲಂಭಿತವಾಗಿದೆ. ಇತ್ತೀಚೆಗೆ ಅಮೇರಿಕಾಗೆ ಭೇಟಿ ನೀಡಿದ್ದ ಮೋದಿ ಅಮೇರಿಕಾದ 5ನೇ ತಲೆಮಾರಿನ ಎಫ್​-35 ಯುದ್ದ ವಿಮಾನಗಳನ್ನು ಪಡೆಯುವ ಕುರಿತು ಮಾತನಾಡಿದ್ದರು.

ಇದನ್ನೂ ಓದಿ :ವಿಜಯೇಂದ್ರ-ಪ್ರತಾಪ್‌ ಸಿಂಹ ಮುಖಾಮುಖಿ: ವೈಮನಸ್ಸು ಮರೆತರೆ ಭಿನ್ನರು !

ಇವೆಲ್ಲಾದರ ನಡುವೆ ಭಾರತದ ವಾಯುಪಡೆ ಇನ್ನು ದೇಶಿಯ ನಿರ್ಮಿತ ತೇಜಸ್​ ಲಘು ಯುದ್ದ ವಿಮಾನಗಳಿಗಾಗಿ ಕಾಯುತ್ತಿದೆ. ಈ ಕುರಿತು ಕಳೆದ ತಿಂಗಳು ನಡೆದ 21ನೇ ಸುಬ್ರೋತೋ ಮುಖರ್ಜಿ ಸೆಮಿನಾರ್‌ನಲ್ಲಿ ವಾಯು ಪಡೆ ಮುಖ್ಯಸ್ಥ ಎ,ಪಿ ಸಿಂಗ್​ ಬೇಸರ ವ್ಯಕ್ತಪಡಿಸಿದ್ದರು. 1984ರಲ್ಲಿ ತೇಜಸ್​ ವಿಮಾನ ನಿರ್ಮಾಣ ಆರಂಭವಾಗಿದೆ. ಆದರೆ 2025ರಲ್ಲಿ ನಾವಿನ್ನು ಮೊದಲ 40 ವಿಮಾನಗಳಿಗಾಗಿ ಕಾಯುತ್ತಿದ್ದೇವೆ ಎಂದು ನಮ್ಮ ಉತ್ಪಾದನ ಸಾರ್ಮಥ್ಯದ ಕುರಿತು ಬೇಸರ ಹೊರಹಾಕಿದ್ದರು.

ಇದರ ಬೆನ್ನಲ್ಲೆ ರಕ್ಷಣಾ ಇಲಾಖೆ ಎಚ್‌ಎಎಲ್ ನಿಂದ ತೇಜಸ್​ ಯುದ್ಧ ವಿಮಾನ ಪೂರೈಕೆ ವಿಳಂಬದ ಬಗ್ಗೆ ತನಿಖೆಗೆ ಆದೇಶಿಸಿದ್ದು. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡಲು ಸೂಚನೆ ನೀಡಿದೆ.

Exit mobile version