Site icon PowerTV

ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ನಟ ಶಿವರಾಜಕುಮಾರ್ ದಂಪತಿ

ರಾಯಚೂರು : ಹ್ಯಾಟ್ರಿಕ್​ ಹೀರೋ ನಟ ಶಿವರಾಜ್​ ಕುಮಾರ್​ ದಂಪತಿಗಳು ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದಿದ್ದಾರೆ. ಕ್ಯಾನ್ಸರ್​ನಿಂದ ಗುಣಮುಖರಾದ ಶಿವಣ್ಣ ಇದೇ ಮೊದಲ ಬಾರಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.

ನಟ ಶಿವರಾಜ್​ ಕುಮಾರ್ ಮೂತ್ರಕೋಶದ ಕ್ಯಾನ್ಸರ್​ನಿಂದ ಅಮೇರಿಕಾದ ಮಿಯಾಮಿಗೆ ತೆರಳಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಗುಣಮುಖರಾಗಿದ್ದ ಶಿವಣ್ಣ ಕಳೆದ ಜನವರಿ 26ರಂದು ಬೆಂಗಳೂರಿಗೆ ವಾಪಾಸಾಗಿದ್ದರು. ತಾಯ್ನಾಡಿಗೆ ವಾಪಾಸದ ಬಳಿಕ ಶಿವಣ್ಣ ವಿಶ್ರಾಂತಿಯಲ್ಲಿದ್ದರು. ಇದೀಗ ಮೊದಲ ಭಾರಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ :ರಾಜಕೀಯಕ್ಕೆ ಹೊಸ ಜನರು ಬರಬೇಕು, ಮಕ್ಕಳು, ಮೊಮ್ಮಕ್ಕಳೆ ಇರೋದಲ್ಲ: ಯತ್ನಾಳ್​

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಶಿವಣ್ಣ ದಂಪತಿಗೆ ಆರ್ಶಿವದಿಸಿದ್ದು.ಅನುಗ್ರಹ ಫಲಮಂತ್ರಾಕ್ಷತೆ ಶೇಷ ವಸ್ತ್ರ ನೀಡಿ ಆರ್ಶೀವದಿಸಿದ್ದಾರೆ. ಈ ವೇಳೆ ಶಿವಣ್ಣ ರಾಯರ ಅನುಗ್ರಹದ ಬಗ್ಗೆ ಮೆಲುಕು ಹಾಕಿದರು.

Exit mobile version