Site icon PowerTV

ತೋಟದ ಮನೆಗೆ ಬೆಂಕಿ: 5 ಹಸು, 1 ಕರು ಬೆಂಕಿಗಾಹುತಿ !

ಹಾಸನ : ತೋಟದ ಮನೆಗೆ ಬೆಂಕಿ ತಗುಲಿ ಐದು ಹಸುಗಳು, ಒಂದು ಕರು ಸೇರಿದಂತೆ ಸಾವಿರಾರು ತೆಂಗಿನಕಾಯಿಗಳು ಬೆಂಕಿಗಾಹುತಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಶಿವಣ್ಣ ಎಂಬುವವರಿಗೆ ಸೇರಿದ್ದ ತೋಟದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಹೆಂಜಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಶಿವಣ್ಣ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ಶಿವಣ್ಣ ಹಾಲು ಕರೆದು ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಜಾಜೂರಿನಲ್ಲಿದ್ದ ಮನೆಗೆ ತಮ್ಮ ಮನೆಗೆ ಬಂದಿದ್ದರು. ಆದರೆ ರಾತ್ರಿ ಸಮಯದಲ್ಲಿ ಕೊಟ್ಟಿಗೆಗೆ ಬೆಂಕಿ ತಗುಲಿದೆ.

ಇದನ್ನೂ ಓದಿ :25 ಜನ ಪ್ರಯಾಣಿಸುತ್ತಿದ್ದ ಬಸ್​ ಪಲ್ಟಿ: ಕ್ಷಣಾರ್ಧದಲ್ಲಿ ತಪ್ಪಿತು ಭಾರೀ ದುರಂತ

ಬೆಂಕಿಯ ಅವಘಡದಲ್ಲಿ ಕೊಟ್ಟಿಗೆಯಲ್ಲಿದ್ದ 5 ಹಸುಗಳು, 1 ಕರು ಸೇರಿದಂತೆ ಸುಮಾರು 15ಲಕ್ಷದಷ್ಟು ಕೊಬ್ಬರಿ ಮತ್ತು 10 ಸಾವಿರ ತೆಂಗಿನಕಾಯಿಗಳು ಬೆಂಕಿಗೆ ಆಹುತಿಯಾಗಿದೆ. ಬೆಳಿಗ್ಗೆ ಎದ್ದು ತೋಟಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು. ರೈತ ಶಿವಣ್ಣಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಮತ್ತು ಗೃಹ ಮಂಡಳಿ ಅಧ್ಯಕ್ಷ ಶಾಸಕ ಕೆ.ಎಂ ಶಿವಲಿಂಗೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ. ರೈತ ಶಿವಣ್ಣನಿಗೆ ಧೈರ್ಯ ಹೇಳಿದ್ದಾರೆ.

Exit mobile version