Site icon PowerTV

ಕಾರ್​ ರೇಸ್​ನಲ್ಲಿ ಭಾಗವಹಿಸಿದ್ದ ಅಜಿತ್​ಗೆ ಮತ್ತೊಂದು ಅಪಘಾತದ ಅಘಾತ

ಸ್ಪೇನ್‌ನಲ್ಲಿ ನಡೆಯುತ್ತಿರುವ ಕಾರ್​ ರೇಸ್‌ನಲ್ಲಿ ನಟ ಅಜಿತ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿದೆ.

ಸ್ಪೇನ್‌ನ ವೇಲೆನ್ಸಿಯಾದಲ್ಲಿ ನಡೆದ ರೇಸ್‌ನಲ್ಲಿ ಅಜಿತ್ ಭಾಗವಹಿಸಿದ್ದರು. ಈ ವೇಳೆ ಅವರ ಕಾರು ಇನ್ನೊಂದು ಕಾರಿಗೆ ಹಿಂಭಾಗದಿಂದ ಡಿಕ್ಕಿಯಾಗಿ, 2 ಬಾರಿ ಪಲ್ಟಿಯಾಗಿ ನಿಂತಿದೆ.

ಅಪಘಾತದ ವಿಡಿಯೋವನ್ನು ಅಜಿತ್​ ಅವರ ವ್ಯವಸ್ಥಾಪಕ ಸುರೇಶ್​ ಚಂದ್ರ ಎಕ್ಷ್​ನಲ್ಲಿ ಹಂಚಿಕೊಂಡಿದ್ದು. ಅಪಘಾತದ ಬಗ್ಗೆ ಅಜಿತ್​ ಅಭಿಮಾನಿಗಳು ಕಳವಳಭ ವ್ಯಕ್ತಪಡಿಸಿದ್ದಾರೆ. ಅಜಿತ್​ ಅವರು ಕೇವಲ 1 ತಿಂಗಳಲ್ಲೆ ನಡೆದ ಎರಡನೇ ಪ್ರಮುಖ ಅಪಘಾತ ಇದಾಗಿದೆ. ಇದಕ್ಕೂ ಮುನ್ನ ದುಬೈನಲ್ಲಿ ನಡೆಯುತ್ತಿದ್ದ ಕಾರ್​ ರೇಸ್​ಗೆ ಅಭ್ಯಾಸ ನಡೆಸುವ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ತಡೆಗೋಡೆಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ :ಜಿಮ್ಸ್ ಆಸ್ಪತ್ರೆ ವೈದ್ಯರ ಎಡವಟ್ಟು: ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ ಉಂಡೆ, ಹತ್ತಿ ಬಿಟ್ಟು ಹೊಲಿಗೆ

ಅಜಿತ್ ರೇಸಿಂಗ್‌ನಲ್ಲಿ ತೊಡಗಿಕೊಳ್ಳಲು ಕಳೆದ ವರ್ಷ ತಮ್ಮ ನಟನಾ ವೃತ್ತಿಯನ್ನು ಬದಿಗಿಟ್ಟು, ಪೋರ್ಷೆ 992 GT3 ಕಪ್ ವಿಭಾಗದಲ್ಲಿ FIA 24H ಸರಣಿಯಲ್ಲಿ ತಮ್ಮದೇ ಆದ ರೇಸಿಂಗ್‌ ತಂಡ ರಚಿಸಿಕೊಂಡು, ರೇಸ್‌ನಲ್ಲಿ ತೊಡಗುತ್ತಿದ್ದಾರೆ.

Exit mobile version