Site icon PowerTV

ಆಟವಾಡುವ ವೇಳೆ ಹೃದಯಘಾತ: SSLC ವಿದ್ಯಾರ್ಥಿ ಸಾ*ವು !

ತುಮಕೂರು : ಹೃದಯಾಘಾತದಿಂದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು. ಮೃತ ಬಾಲಕನನ್ನು ರಾಹುಲ್​ ಬಿ.ಜೆ ಎಂದು ಗುರುತಿಸಲಾಗಿದೆ.

ತುಮಕೂರಿನ, ಚಿಕ್ಕನಾಯಕನಹಳ್ಳಿ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು. ರಾಹುಲ್​ ಚಿಕ್ಕನಾಯಕನಹಳ್ಳಿಯ ಜಿ.ಎಚ್.ಎಸ್​​ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದನು. ಎಂದಿನಂತೆ ಶಾಲೆ ಮುಗಿಸಿ ಮನೆಗೆ ಬಂದ ರಾಹುಲ್​ ಮನೆಯಯವರ ಬಳಿ ಎದೆ ನೋವಿನ ವಿಚಾರವನ್ನು ತಿಳಿಸಿದ್ದನು.

ಇದನ್ನೂ ಓದಿ :ಬೇಸಿಗೆ ಆರಂಭ: ಕಾಡ್ಗಿಚ್ಚಿನಿಂದ ಬಂಡೀಪುರ ಅರಣ್ಯ ರಕ್ಷಿಸಲು ಮುನ್ನೆಚ್ಚರಿಕೆ ಕೈಗೊಂಡ ಅರಣ್ಯ ಇಲಾಖೆ

ಆದರೂ ಆಟವಾಡಲು ಎಂದು ಹೋಗಿದ್ದಾಗ ಬಾಲಕ ಹೃದಯಘಾತದಿಂದ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಹುಳಿಯಾರೂ ಆಸ್ಪತ್ರೆಗೆ ದಾಖಲಿಸಿತಾದರೂ ಬಾಲಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಇನ್ನೂ ಬದುಕಿ ಬಾಳಬೇಕಿದ್ದ ಯುವಕರು ಇತ್ತೀಚೆಗೆ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ವಿಚಾರವಾಗಿದೆ.

Exit mobile version