Tuesday, August 26, 2025
Google search engine
HomeUncategorizedಜನರನ್ನು ಬದಲಾಯಿಸುವ ಬದಲು, ವ್ಯವಸ್ಥೆಯನ್ನೆ ಬದಲಾಯಿಸಬೇಕು: ಚೇತನ್​ ಅಹಿಂಸಾ

ಜನರನ್ನು ಬದಲಾಯಿಸುವ ಬದಲು, ವ್ಯವಸ್ಥೆಯನ್ನೆ ಬದಲಾಯಿಸಬೇಕು: ಚೇತನ್​ ಅಹಿಂಸಾ

ಬಳ್ಳಾರಿ : ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಬಳ್ಳಾರಿಯ ಕಂಪ್ಲಿಗೆ ಭೇಟಿ ನೀಡಿದ್ದು. ಸಮಾಜದಲ್ಲಿ ಸಮಾನತೆ ತಂದು ನ್ಯಾಯಯುತ ಸಮಾಜವನ್ನು ನಿರ್ಮಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

ಕಂಪ್ಲಿಯಲ್ಲಿ ಚರ್ಚೆ ನಡೆಸಿದ ಚೇತನ್​ ಅಹಿಂಸಾ ಸಮಾಜದಲ್ಲಿ ಸಮಾನತೆ ತರಲು ಮತ್ತು ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ನಡೆಸಬೇಕಾದ ಕಾರ್ಯಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ಬಂಡವಾಳ ಶಾಹಿ ನೀತಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದ ಚೇತನ್​ “ಈ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನ ಮಾಡಬೇಕಾಗಿದೆ. ಜನರನ್ನು ಬದಲಾಯಿಸುವ ಬದಲು, ವ್ಯವಸ್ಥೆಯೇ ಬದಲಾಗಬೇಕು” ಎಂದು ಕರೆ ನೀಡಿದರು.

ಇದನ್ನೂ ಓದಿ :ಆಟವಾಡುವ ವೇಳೆ ಹೃದಯಘಾತ: SSLC ವಿದ್ಯಾರ್ಥಿ ಸಾ*ವು !

ಸೇವಾ ಮನೋಭಾವ ಇರುವವರು ರಾಜಕೀಯಕ್ಕೆ ಬರಬೇಕು. ಅಂಬೇಡ್ಕರ್ ಅವರ ಮಾರ್ಗದಲ್ಲಿ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.ಚೇತನ್ ಅವರ ಮಾತುಗಳು ಸ್ಥಳೀಯ ಯುವಜನತೆ ಮತ್ತು ಕಾರ್ಯಕರ್ತರಲ್ಲಿ ಭಾರೀ ಸ್ಪಂದನೆ ಮೂಡಿಸಿವೆ. ಅವರ ಜಾಗೃತಿಯ ಸಂದೇಶ ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೆ ಕಾರಣವಾಗುವ ನಿರೀಕ್ಷೆಯಿದೆ ಎಂಬುದು ಸಭೆಯಲ್ಲಿದ್ದವರ ಮಾತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments