Site icon PowerTV

ನಾವೇನೋ ಸತ್ತೋಗಿದಿವಿ ಓಕೆ, ನೀನು ಏನ್ ಮಾಡಿದ್ದೀಯಾ: ಡಿ.ಕೆ ಶಿವಕುಮಾರ್​

ರಾಮನಗರ : ಅಭಿವೃದ್ಧಿ ವಿಚಾರ ರಾಜ್ಯ ಸರ್ಕಾರ ಸತ್ತುಹೋಗಿದೆ ಎಂಬ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು. ನಾವೇನೋ ಸತ್ತೋಗಿದ್ದಿವಿ, ನೀನೇನು ಮಾಡಿದ್ದೀಯಾ ಹೇಳಪ್ಪ ಎಂದು ಹೇಳದರು.

ಕುಮಾರಸ್ವಾಮಿ ಹೇಳಿಕೆಯಿಂದ ಕೆರಳಿದ ಡಿಸಿಎಂ ಡಿಕೆಶಿ ಹೆಚ್​ಡಿಕೆ ವಿರುದ್ದ ವಾಗ್ದಾಳಿ ನಡೆಸಿದ್ದು. ನಾವೇನೂ ಮಾಡಿದ್ದೀವಿ ಬೇಡಾ, ನೀನು ಅಧಿಕಾರದಲ್ಲಿದ್ದಾಗ, ಏನ್​ ಮಾಡಿದೆ ಮೊದಲು ಹೇಳಪ್ಪ. ಈಗ ಮಂತ್ರಿಗಿರಿ ಕೊಟ್ಟಿದ್ದಾರಲ್ಲ ನೀನು ಏನು ಮಾಡ್ತೀಯಾ ಮೊದಲು ಹೇಳು. ನಾವು ಸಹಕಾರ ಕೊಡ್ತೇವೆ. ನೀನು ಬರಿ ಪಾಲಿಟಿಕ್ಸ್ ಮಾಡ್ತಾ ಇದೀಯಾ.

ಇದನ್ನೂ ಓದಿ :ಅಕ್ರಮ ಸಂಬಂಧದ ಅನುಮಾನ: ಪತ್ನಿಯ ಕಣ್ಣುಗುಡ್ಡೆಯನ್ನೆ ಕಿತ್ತ ಪಾಪಿ ಪತಿ

ರಾಮನಗರ ಜಿಲ್ಲೆನಾ ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಿದರೆ. ಕೇಂದ್ರದಲ್ಲಿ ಹೋಗಿ ತಕರಾರು ಮಾಡ್ತಿಯಾ. ನಾವು ಆ ತರ ತಕರಾರು ಮಾಡೋ ಕೆಲಸಕ್ಕೆ ಹೋಗೋದಿಲ್ಲ. ರಾಜನಾಥ್ ಸಿಂಗ್ ಬಂದು ಏನು ಹೇಳಿದ್ರು ಅದು ತಲೆಯಲ್ಲಿ ಇರಲಿ. ಒಂದು ದಿನದಲ್ಲಿ ಮೇಕೆದಾಟು ಯೋಜನೆಗೆ ಸಹಿ ಹಾಕಿಸ್ತೇನೆ ಅಂದಲ್ಲ.ಯಾಕೆ ಮಾಡಲಿಲ್ಲ.? ನಿನಗೆ ರಾಜಕಾರಣ ‌ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ.

ದ್ವೇಷದ ರಾಜಕಾರಣವೇ ನಿನಗೆ ದೊಡ್ಡದಾಗಿದೆ. ದೇಶದಲ್ಲಿ ನಾವೇಲ್ಲರೂ ಒಂದು ಅಂತ ನಾವು ಹೋಗ್ತೇವೆ.
ದ್ವೇಷದಿಂದ ಯಾರು ಏನು‌ಮಾಡಿಲ್ಲ.ಚಕ್ರವರ್ತಿಗಳೆಲ್ಲ ಕೆಳಗೆ ಬಿದ್ದೋಗಿದ್ದಾರೆ. ರಾಜಕಾರಣದಲ್ಲಿ ಯಾರೂ ಪರ್ಮನೆಂಟ್ ಅಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ವಾಗ್ದಾಳಿ ನಡೆಸಿದರು.

Exit mobile version