Site icon PowerTV

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ರಾಜಣ್ಣ ಕೇಳಿದ್ದಾರೆ: ಸತೀಶ್​ ಜಾರಕಿಹೊಳಿ

ಕೋಲಾರ : ಲೋಕೋಪಯೋಗಿ ಸಚಿವ ಸತೀಶ್​​ ಜಾರಕಿಹೋಳಿ ಮಾಧ್ಯಮದೊಂದಿಗೆ ಮಾತನಾಡಿದ್ದು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನನ್ನ ಬೇಡಿಕೆ ಅಲ್ಲ. ಇದು ಸಚಿವ ರಾಜಣ್ಣರ ಬೇಡಿಕೆ, ಈ ಕುರಿತು ಅವರನ್ನೆ ಕೇಳಿ ಎಂದು ಹೇಳಿದರು.

ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಸತೀಶ್​ ಜಾರಕಿಹೊಳಿ ‘ನಾನು 2028ಕ್ಕೆ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿ. ಈ ಅವಧಿಗೆ ನಾನು ಸಿಎಂ ಹುದ್ದೆಯನ್ನು ಕೇಳಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ನನ್ನ ಬೇಡಿಕೆ ಅಲ್ಲ. ಅದು ರಾಜಣ್ಣರ ಬೇಡಿಕೆ.ಈ ಕುರಿತು ಅವರ ಬಳಿಯೆ ಕೇಳಿ. ಮತ್ತೊಮ್ಮೆ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರುವುದು ನನ್ನ ಗುರಿ.

ಇದನ್ನೂ ಓದಿ :ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಅದೇ ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ ಗಂಡ: ಪತ್ನಿ ಆತ್ಮಹ*ತ್ಯೆ

ಸಿದ್ದರಾಮಯ್ಯರನ್ನು ನಾನು ಮುಖ್ಯಮಂತ್ರಿ ಮಾಡಿಲ್ಲ. ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರಿಯುವ ವಿಚಾರ ನನ್ನ ವ್ಯಾಪ್ತಿಯಲ್ಲಿ ಬರೊಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವರಿಷ್ಟರಿಗೆ ಸಂಭಧಿಸಿದ್ದು. ಮೈಸೂರಿನ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮವನ್ನು ಖಚಿತವಾಗಿ ತೆಗೆದುಕೊಳ್ಳುತ್ತೇವೆ. ಶೋಷಿತರ ಸಮಾವೇಶ ನಡೆಸುವ ಕುರಿತು ಮಾಹಿತಿ ಇಲ್ಲ, ಸಮಾವೇಶದ ಕುರಿತು ರಾಜಣ್ಣ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

Exit mobile version