Site icon PowerTV

ಅಳಿಯ ಎಂಬುದನ್ನು ನೋಡದೆ ಕಾರದ ಪುಡಿ ಎರಚಿ ಥಳಿಸಿದ ಅತ್ತೆ: ಸಾಥ್​ ನೀಡಿದ ಹೆಂಡತಿ

ಚಾಮರಾಜನಗರ : ಹಬ್ಬಕ್ಕೆ ಎಂದು ತವರಿಗೆ ತೆರಳಿದ್ದ ಪತ್ನಿಯನ್ನು ಕರೆದೊಯ್ಯಲು ಬಂದಿದ್ದ ಗಂಡನಿಗೆ ಅತ್ತೆ ಮತ್ತು ಹೆಂಡತಿ ಇಬ್ಬರು ಸೇರಿ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು 40 ವರ್ಷದ ಧರ್ಮ ಎಂದು ಗುರುತಿಸಲಾಗಿದೆ.

ಚಾಮರಾಜನಗರದ ಕೊಳ್ಳೇಗಾಲ ಪಟ್ಟಣದಲ್ಲಿ ಘಟನೆ ನಡೆದಿದೆ. ಫೆ.1ರಂದು ಧರ್ಮನ ಪತ್ನಿ ಮಕ್ಕಳೊಂದಿಗೆ  ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ರಥೋತ್ಸವ ಹಬ್ಬಕ್ಕೆ ತವರಿಗೆ ಹೋಗಿದ್ದಳು. ಆಕೆಯನ್ನು ಕರೆದೊಯ್ಯಲು ಪತಿ ಫೆ.13ರಂದು ಅತ್ತೆಯ ಮನೆಗೆ ಬಂದಿದ್ದನು. ಈ ವೇಳೆ ಅತ್ತೆ ಮತ್ತು ಹೆಂಡತಿ ನಡುವೆ ಗಲಾಟೆಯಾಗಿದ್ದು. ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ :ನಾವೇನೋ ಸತ್ತೋಗಿದಿವಿ ಓಕೆ, ನೀನು ಏನ್ ಮಾಡಿದ್ದೀಯಾ: ಡಿ.ಕೆ ಶಿವಕುಮಾರ್​

ಈ ಗಲಾಟೆಯಲ್ಲಿ ಅತ್ತೆ ಮತ್ತು ಹೆಂಡತಿ ಧರ್ಮನ ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಧರ್ಮನನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Exit mobile version