Site icon PowerTV

ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ರಾಣಾನನ್ನು ಭಾರತಕ್ಕೆ ಒಪ್ಪಿಸಿದ ಟ್ರಂಪ್​

ವಾಷಿಂಗ್ಟನ್‌: 2008ರ ಮುಂಬೈ ಭಯೋತ್ಪಾದಕ ದಾಳಿಯ  ಆರೋಪಿ ತಹವ್ವೂರ್‌ ರಾಣಾನನ್ನು  ಭಾರತಕ್ಕೆ ಹಸ್ತಾಂತರಿಸಲು ಅಮೆರಿಕಾ ಒಪ್ಪಿಕೊಂಡಿದೆ. ಪ್ರಧಾನಿ ಮೋದಿ ಎದುರಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ‌ಈ ಕುರಿತು  ಘೋಷಣೆ ಮಾಡಿದ್ದಾರೆ.

ಡೋನಾಲ್ಡ್​ ಟ್ರಂಪ್​ ಎರಡನೇ ಭಾರಿಗೆ ಅಮೇರಿಕಾದ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಅಕ್ರಮ ವಲಸೆ, ಭಯೋತ್ಪಾದನೆ ವಿರುದ್ದ ಹೋರಾಟ, ಶಸ್ತ್ರಾಸ್ತ ಖರೀದಿ ಸೇರಿದಂತೆ ಅನೇಕ ಒಪ್ಪಂದಗಳು ಏರ್ಪಡುವ ಸಾಧ್ಯತೆ ಇದೆ. ಇದರ ನಡುವೆ ಟ್ರಂಪ್​ ಹೊಸ ಘೋಷಣೆ ಮಾಡಿದ್ದು. 26/11ರ ದಾಳಿಯ ಪ್ರಮುಖ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಕೊಂಡಿದೆ.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ: ಮದುವೆಯಾದ ಕೆಲವೆ ಗಂಟೆಗಳಲ್ಲಿ ಸಾವನ್ನಪ್ಪಿದ ವರ

ಪ್ರಧಾನಿ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಂತರ, ಮುಂಬೈ ದಾಳಿ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಒಪ್ಪಿಕೊಂಡಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಮುಂಬೈ ಭಯೋತ್ಪಾದಕ ದಾಳಿಯ ಆರೋಪಿಯಾಗಿರುವ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ಭಾರತಕ್ಕೆ ಹಸ್ತಾಂತರಿಸುತ್ತಿದ್ದೇವೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

26/11 ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ಪ್ರಸ್ತುತ ಅಮೆರಿಕದಲ್ಲಿ ಹೆಚ್ಚಿನ ಭದ್ರತೆಯ ಜೈಲಿನಲ್ಲಿದ್ದಾನೆ. ಭಾರತ ಹಲವು ವರ್ಷಗಳಿಂದ ಆತನನ್ನು ಹಸ್ತಾಂತರಿಸುವಂತೆ ಕೋರುತ್ತಿದೆ. ಇದರ ಕುರಿತು ಸುಪ್ರಿಂ ಕೋರ್ಟ್ ಇದರ ಕುರಿತು ಆತನನ್ನು ಭಾರತಕ್ಕೆ ಗಡಿಪಾರು ಮಾಡಲು ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು.

 

Exit mobile version