Site icon PowerTV

ಕೆಲಸಕ್ಕೆ ಸೇರಿ ಮೂರನೇ ವರ್ಷದ ಸಂಭ್ರಮದಲ್ಲಿದ್ದ ಯೋಧ ಗುಂಡೇಟು ತಗುಲಿ ಸಾವು

ಬೆಳಗಾವಿ : ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ನೌಕಾಪಡೆಯ ಯೋಧ ಸಾವಿಗೀಡಾದ ಘಟನೆ ಚೆನ್ನೈನಲ್ಲಿ ನಡೆದಿದೆ. ಮೃತನನ್ನು ಬೆಳಗಾವಿಯ ಮೂಡಲಗಿಯ ಕಲ್ಲೋಳಿ ಗ್ರಾಮದ ಪ್ರವೀಣ್​ ಸುಭಾಷ್​ ಎಂದು ಗುರುತಿಸಲಾಗಿದೆ.

ಮೃತ ಪ್ರವೀಣ್​ ಸುಭಾಷ್​ ಸಾಯುವುದಕ್ಕೂ ಒಂದು ಗಂಟೆಗೆ ಮುನ್ನ ತಾಯಿಯ ಜೊತೆ ಮಾತನಾಡಿದ್ದನು. ಆದರೆ ಮಿಸ್ ಫೈಯರ್​ ಆಗಿ ತಲೆಗೆ ಗುಂಡು ಬಿದ್ದು ಪ್ರವೀಣ್​​ ಮೃತಪಟ್ಟಿದ್ದಾರೆ. ಇವರು ಚೆನೈನ ನೌಕದಳದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.  ಪ್ರವೀಣ್​ 2020ರ ಫೆಬ್ರವರಿ 12ರಂದು ನೌಕಾಸೇನೆಗೆ ಸೇರ್ಪಡೆಯಾಗಿದ್ದರು. ಆದರೆ ಕಾಕತಾಳೀಯವೆಂಬಂದೆ ಅದೇ ದಿನ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ :ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ರಾಣಾನನ್ನು ಭಾರತಕ್ಕೆ ಒಪ್ಪಿಸಿದ ಟ್ರಂಪ್​

ಮೃತ ಸೈನಿಕ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ಕಲ್ಲೋಳಿ ಗ್ರಾಮದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.

Exit mobile version