Site icon PowerTV

ಸಾಲ ವಸೂಲಾತಿಗೆ ಬರುತ್ತಿದ್ದ ಯುವಕನನ್ನೆ ಮದುವೆಯಾದ ಯುವತಿ !

ಬಿಹಾರ : ಕುಡುಕ ಗಂಡನ ಕಾಟದಿಂದ ಬೇಸತ್ತ ಮಹಿಳೆಯೊಬ್ಬಳು ಸಾಲ ವಸೂಲಾತಿಗೆ ಮನೆಗೆ ಬರುತ್ತಿದ್ದ ಲೋನ್​ ರಿಕವರಿ ಏಜೆಂಟ್​ನನ್ನು ಮದುವೆಯಾಗಿರುವ ಘಟನೆ ಬಿಹಾರದ ಜಮುಯಿ ಎಂಬಲ್ಲಿ ನಡೆದಿದ್ದು. ಮದುವೆಯಾದ ಯುವತಿಯನ್ನು 21 ವರ್ಷದ ಇಂದ್ರ ಕುಮಾರಿ ಎಂದು ತಿಳಿದು ಬಂದಿದೆ.

ಇಂದ್ರ ಕುಮಾರಿ 2022 ರಲ್ಲಿ ಚಕೈ ನಿವಾಸಿ ನಕುಲ್ ಶರ್ಮಾ ಅವರನ್ನು ವಿವಾಹವಾಗಿದ್ದಳು. ಆದರೆ ಗಂಡ ನಕುಲನ ಮದ್ಯದ ಚಟ ಮತ್ತು ಹಿಂಸಾಚಾರದಿಂದಾಗಿ ಜೀವನ ಕಷ್ಟಕರವಾಗಿ ಪರಿಣಮಿಸಿತ್ತು. ಈ ಸಮಯದಲ್ಲಿ ಅವರು ಹಣಕಾಸು ಕಂಪನಿಯಲ್ಲಿ ಸಾಲ ವಸೂಲಾತಿ ಏಜೆಂಟ್ ಆಗಿರುವ ಪವನ್ ಕುಮಾರ್ ಯಾದವ್ ಅವರನ್ನು ಭೇಟಿಯಾದರು. ಇಬ್ಬರ ನಡುವಿನ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿ ಕಳೆದ ಐದು ತಿಂಗಳಿನಿಂದ ಅವರ ಪ್ರೇಮ ಸಂಬಂಧ ನಡೆಯುತ್ತಿತ್ತು.

ಇದನ್ನೂ ಓದಿ :ಕಾಂಗ್ರೆಸ್​ನವರು ಮುಸ್ಲಿಮರು ಕೊಟ್ಟ ಭಿಕ್ಷೆಯಲ್ಲಿ ಬದುಕುತ್ತಿದ್ದಾರೆ: ಆರ್​. ಅಶೋಕ್​

ಇದೇ ಫೆಬ್ರವರಿ 04ರಂದು ಇಬ್ಬರು ಮನೆಯಿಂದ ಓಡಿಹೋಗಿ ಯುವತಿಯ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದ್ದರು. ಇದಾದ ನಂತರ ಫೆಬ್ರವರಿನ 11ರಂದು ಇಬ್ಬರು ಜಮುಯಯಲ್ಲಿರುವ ತ್ರಿಪುರರಿ ಘಾಟ್​ನಲ್ಲಿರುವ ಶಿವನ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಮದುವೆ ನಂತರ ಯುವಕ ಪವನ್​ ಕುಟುಂಬಸ್ಥರು ಮದುವೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಯುವತಿ ಕುಟುಂಬಸ್ಥರು ಮದುವೆಗೆ ಒಪ್ಪದೆ ಚಕೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Exit mobile version