Site icon PowerTV

ಕೇವಲ 10 ದಿನಗಳಲ್ಲಿ 25ಕ್ಕೂ ಹೆಚ್ಚು ಹಸುಗಳ ಸಾ*ವು: ಮಾರಣಾಂತಿಕ ಕಾಯಿಲೆಯ ಭೀತಿ

ರಾಮನಗರ : ಜಿಲ್ಲೆಯಲ್ಲಿ ಹಸುಗಳಿಗೆ ಮಾರಣಾಂತಿಕ ಕಾಯಿಲೆ ಕಾಡುತ್ತಿದ್ದು. ರಾಮನಗದ ಪುಣ್ಯಕೋಟಿ ಗೋಶಾಲೆಯಲ್ಲಿ ಕೇವಲ 10 ದಿನಗಳಲ್ಲಿ 25ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ರಾಮನಗರದ ಪುಣ್ಯಕೋಟಿ ಗೋಶಾಲೆಯಲ್ಲಿ ಕೇವಲ 10ದಿನಗಳಲ್ಲಿ‌ 25ಕ್ಕೂ ಹೆಚ್ಚು ಹಸುಗಳ ಸಾವನ್ನಪ್ಪಿದ್ದು. ತೀವ್ರ ಹೊಟ್ಟೆ ನೋವಿನಿಂದ ಬಳಲಿ ಕೇವಲ ಒಂದು ದಿನದಲ್ಲೇ ಜಾನುವಾರುಗಳು ಸಾವೀಗೀಡಾಗಿವೆ. ಜಾನುವಾರುಗಳ ಶವ ಪರೀಕ್ಷೆಯಲ್ಲಿ ಹೆಮಾರಾಜಿಕ್ ಬೋವೆಲ್ ಖಾಯಿಲೆಯ ಶಂಕೆ ವ್ಯಕ್ತಪಡಿಸಿದ್ದು. ತೀವ್ರ ಕರುಳಿನ ರಕ್ತಸ್ರಾವವಾಗಿ ಹಸುಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಬಯಲಾಟದಲ್ಲಿ ಭರ್ಜರಿಯಾಗಿ ಸ್ಟೆಪ್ಸ್​ ಹಾಕಿದ ಮಾಜಿ ಸಚಿವ ಶ್ರೀರಾಮುಲು

ಹಸುಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡ 24 ಗಂಟೆಗಳಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿದ್ದು. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕೆಂದು ಗೋಪಾಲಕರು ಮನವಿ ಮಾಡಿದ್ದಾರೆ. ಜೊತೆಗೆ ಹಸುಗಳ ಸಾವಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದು. ಸದ್ಯ ಸಾವನ್ನಪ್ಪಿದ ಹಸುಗಳ ಸ್ಯಾಂಪಲ್ಸ್ ಪ್ರಯೋಗಾಲಯಕ್ಕೆ ರವಾನಿಸಿದ್ದು. ವರದಿ ಬಂದ ಬಳಿಕ ತಜ್ಙರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಪಶು ಸಂಗೋಪನೆ. ಇಲಾಖೆ ಉಪನಿರ್ದೇಶಕ ಮಾಹಿತಿ ನೀಡಿದ್ದಾರೆ.

Exit mobile version