Site icon PowerTV

ಮನೆ ಕಟ್ಟಬೇಕೆನ್ನುವ ವೃದ್ದೆಯ ಆಸೆಯನ್ನು ಈಡೇರಿಸಿದ ಶಾಸಕ ಭರತ್​ ರೆಡ್ಡಿ

ಬಳ್ಳಾರಿ : ಸಾಮಾನ್ಯವಾಗಿ ಹುಟ್ಟಿದ ಎಲ್ಲರಿಗೂ ಒಂದು ಸ್ವಂತ ಮನೆಯನ್ನು ಕಟ್ಟಬೇಕು ಎಂಬ ಆಸೆ ಇರುತ್ತದೆ. ಕೆಲವರು ಈ ಆಸೆಯನ್ನು ಈಡೇರಿಸಿಕೊಂಡರೆ ಮತ್ತೆ ಕೆಲವರು ಅದರ ಪ್ರಯತ್ನದಲ್ಲೆ ಕಣ್ಮುಚ್ಚಿರುತ್ತಾರೆ. ಆದರೆ ಇಲ್ಲೋಬ್ಬ ಶತಾಯುಷಿ ಅಜ್ಜಿಯ ಮನೆ ಕಟ್ಟಬೇಕು ಎಂಬ ಆಸೆಯನ್ನು ಬಳ್ಳಾರಿ ನಗರ ಶಾಸಕ ಭರತ್​ ರೆಡ್ಡಿ ಈಡೇರಿಸಿದ್ದಾರೆ.

ಬಳ್ಳಾರಿಯ ವಾರ್ಡ್ ಸಂಖ್ಯೆ 09ರ ರಾಜ್ಯೋತ್ಸವ ನಗರದ ಶತಾಯುಷಿ ಅಜ್ಜಿಗೆ ಶಾಸಕ ಭರತ್​ ರೆಡ್ಡಿ ಮನೆಯನ್ನು ಕಟ್ಟಿಕೊಟ್ಟಿದ್ದು. ಎಸ್​ಕೆಡಿಆರ್​ಡಿಪಿ(SKDRDP) ಟ್ರಸ್ಟ್ ವತಿಯಿಂದ ವೃದ್ದೆಯ 10*15ರ ಅಳತೆಯಲ್ಲಿ 1,14,900 ರೂಗಳಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ :ಅಯೋಧ್ಯೆ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ‘ಸತ್ಯೇಂದ್ರ ದಾಸ್’​ ವಿಧಿವಶ

ಮನೆಯ ಗೃಹ ಪ್ರವೇಶಕ್ಕೆ ಅತಿಥಿಯಾಗಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರನ್ನು ಕರೆಸಬೇಕೆಂಬುದು ಅಜ್ಜಿಯ ಆಸೆಯಾಗಿತ್ತು. ಕಾರ್ಯಕ್ರಮಗಳ ಒತ್ತಡದ ನಡುವೆಯೂ ಸಂಜೆ ಬಿಡುವು ಮಾಡಿಕೊಂಡು ಅಜ್ಜಿಯ ನೂತನ ಮನೆಗೆ ಶಾಸಕ ನಾರಾ ಭರತ್ ರೆಡ್ಡಿ ಭೇಟಿ ನೀಡಿ ಅಜ್ಜಿ ನಾಗಮ್ಮ ಅವರ ಆರ್ಶಿವಾದ ಪಡೆದು, ದೀಪ ಬೆಳಗಿಸುವ ಮೂಲಕ ನೂತನ ಮನೆಯನ್ನು ಉದ್ಘಾಟಿಸಿದ್ದಾರೆ. ಶಾಸಕರನ್ನು ಕಂಡ ಅಜ್ಜಿ ನಾಗಮ್ಮ ಬಾವುಕರಾಗಿದ್ದಾರೆ.

 

Exit mobile version