Site icon PowerTV

ಅಣ್ಣ ಹಜಾರೆರನ್ನು ಮಹಾತ್ಮರನ್ನಾಗಿ ಮಾಡಿದ್ದು ಕೇಜ್ರಿವಾಲ್​: ಸಂಜಯ್​ ರಾವತ್​

ಪುಣೆ: ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಅಕ್ರಮಗಳ ವಿರುದ್ದ ಧ್ವನಿ ಎತ್ತುತ್ತಿಲ್ಲ ಎಂದು ಶಿವಸೇನೆ (ಉದ್ದವ್​ಟಾಕ್ರೆ ಬಣ) ಸಂಸದ ಸಂಜಯ್​ ರಾವತ್​ ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ದೆಹಲಿ ಚುನಾವಣೆಯಲ್ಲಿ ಕೇಜ್ರವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ ಮಕಾಡೆ ಮಲಗಿತ್ತು. 2020ರ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಎಎಪಿ ಈ ಬಾರಿಯ ಚುನಾವಣೆಯಲ್ಲಿ ಕೇವಲ 22 ಸ್ಥಾನಗಳನ್ನು ಪಡೆಯಲು ಶಕ್ತವಾಯಿತು. ಇದಕ್ಕೆ ಕಾರಣ ಕೇಜ್ರವಾಲ್​ ಮೇಲಿದ್ದ ಅಬಕಾರಿ ಹಗರಣ ಎಂದು ಅನೇಕ ರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದರು.

ಇದನ್ನೂ ಓದಿ :‘ಚೆನ್ನಾಗಿ ನಿದ್ದೆ ಮಾಡಿ’ ಪರೀಕ್ಷೆಯ ಒತ್ತಡದಲ್ಲಿದ್ದ ವಿದ್ಯಾರ್ಥಿಗಳಿಗೆ ದೀಪಿಕಾ ಸಲಹೆ

ಚುನಾವಣಾ ಫಲಿತಾಂಶ ಬಂದ ದಿನದಂದು ಮಾಧ್ಯಮದೊಂದಿಗೆ ಹೇಳಿಕೆ ನೀಡಿದ ಅಣ್ಣ ಹಜಾರೆ ‘ಕೇಜ್ರಿವಾಲ್​ ಹಣ ಮತ್ತು ಮಧ್ಯದ ಮೇಲೆ ಗಮನ ಹರಿಸಿ ಇಂತಹ ಫಲಿತಾಂಶ ಪಡೆದಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ರಾಷ್ಟ್ರದ್ಯಂತ ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಈ ಹೇಳಿಕೆಗೆ ಸಂಜಯ್​ ರಾವತ್​ ಪ್ರತಿಕ್ರಿಯೆ ನೀಡಿದ್ದು. 2014ರ ನಂತರ ಅಣ್ಣ ಹಜಾರೆ ಬಿಜೆಪಿ ಅಕ್ರಮಗಳ ಕುರಿತು ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.

“ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಅಣ್ಣಾ ಹಜಾರೆ ಅವರನ್ನು ಮಹಾತ್ಮರನ್ನಾಗಿ ಮಾಡಿದರು. ಅವರಿಲ್ಲದಿದ್ದರೆ ಅಣ್ಣಾ ದೆಹಲಿಯನ್ನು ನೋಡಲು ಅಥವಾ ರಾಮಲೀಲಾ ಮತ್ತು ಜಂತರ್ ಮಂತರ್‌ಗೆ ಭೇಟಿ ನೀಡಲು(ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಲು) ಸಾಧ್ಯವಿರಲಿಲ್ಲ” ಎಂದು ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾವತ್ ಹೇಳಿದ್ದಾರೆ.

Exit mobile version