Site icon PowerTV

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಟಿಪ್ಸ್​ಗಳು

ಬೆಂಗಳೂರು : ಫೆಬ್ರವರಿ ಆರಂಭದಲ್ಲೆ ರಾಜ್ಯದಲ್ಲಿ ಬಿಸಿಲನ ಜಳ ಹೆಚ್ಚಾಗಿದೆ. ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ದಾರಿಗಳನ್ನು ಹುಡಕುತ್ತಿದ್ದಾರೆ. ಆದರೆ ಇನ್ನು ಮೂರರಿಂದ ನಾಲ್ಕು ತಿಂಗಳ ಕಾಲ ಸೂರ್ಯ ಜನರ ನೆತ್ತಿಯನ್ನು ಸುಡಲು ತಯಾರಿ ನಡೆಸಿದ್ದಾನೆ. ಬೇಸಿಗೆಯ ಬಿಸಿಲು ಜನರ ಆರೋಗ್ಯದ ಮೇಲೂ ಪರಿಣಾಮ ಬೀರಲಿದ್ದು. ಬೇಸಿಗೆಯಲ್ಲಿ ಜನರು ಪಾಲಿಸಬೇಕಾದ ಕೆಲ ಅಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಸಡಿಲವಾದ ಬಟ್ಟೆ ಧರಿಸಿ !

ಬೇಸಿಗೆಯಲ್ಲಿ ಉಣ್ಣೆ, ನೈಲಾನ್​ ರೀತಿಯ ಬಟ್ಟೆಯನ್ನು ಬಳಸುವುದಕ್ಕಿಂತ ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಬೇಕು. ಹೆಚ್ಚು ಗಾಡವಾದ ಬಣ್ಣದ ಬಟ್ಟೆಗಳು ಬಿಸಿಲನ್ನು ಆರ್ಕಷಿಸಲಿದ್ದು. ಕೆಂಪು, ಕಪ್ಪು ಬಣ್ಣದ ಬಟ್ಟೆಗಳನ್ನು ತೊಡುವುದನ್ನು ಸ್ವಲ್ಪ ದಿನ ಮುಂದೂಡಿ.

ನಿರ್ಜಲೀಕರಣ !

ನಮ್ಮ ದೇಹವು ಶೇಖಡಾ 78ರಷ್ಟು ನೀರಿನಿಂದ ಕೂಡಿದ್ದು, ಬೇಸಿಗೆಯಲ್ಲಿ ಸಾಧ್ಯವಾದಷ್ಟು ನೀರನ್ನು ಕುಡಿಯುವುದ ಆರೋಗ್ಯಕ್ಕೆ ಉಪಯುಕ್ತ. ಸಾಧ್ಯವಾದರೆ ನೀರಿನಲ್ಲಿ ಉಪ್ಪು ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ನೀರನ್ನು ಕುಡಿಯಿರಿ. ಹಣ್ಣಿನ ರಸ, ಪಾನಕಗಳನ್ನು, ಎಳೆನೀರನ್ನು ಕುಡಿಯಿರಿ. ಆದರೆ ಸೋಡಾ ಇತ್ಯಾದಿ ಕಾರ್ಬೋನೇಟೆಡ್ ತಂಪು ಪಾನಿಯಗಳು ಆಕರ್ಷಕವಾಗಿ ಕಂಡರು, ರುಚಿಯಾಗಿದ್ದರು ಇವು ಆರೋಗ್ಯಕ್ಕೆ ಹಾನಿಕರವಾಗಿದ್ದು. ಇವುಗಳಿಂದ ಸಾಧ್ಯವಾದಷ್ಟು ದೂರವಿರಿ.

ಇದನ್ನೂ ಓದಿ :ಪ್ರೀತಿ ಮಾಡುತ್ತಿದ್ದ ಮಗಳನ್ನು ಕೊ*ಲೆ ಮಾಡಿ, ಅಪಘಾತದ ನಾಟಕ ಆಡಿದನ ಖತರ್ನಾಕ್​ ತಂದೆ !

ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ಧಿಕರಿಸದೇ ಇರುವ ನೀರನ್ನು ಮತ್ತು ಕೆರೆ, ಕುಂಟೆಗಳ ನೀರನ್ನು ನೇರವಾಗಿ ಕುಡಿಯಬಾರದು. ಕೈಗಳನ್ನು ತೊಳೆದುಕೊಳ್ಳದೇ ಆಹಾರವನ್ನು ಸೇವಿಸಬೇಡಿ. ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಬೇಕು. ಬಯಲು ಪ್ರದೇಶಗಳಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಬಾರದು. ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಮತ್ತು ಕತ್ತಿರಿಸಿಟ್ಟ ಹಣ್ಣುಗಳನ್ನು ತಿನ್ನಬಾರದು.

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ವಸ್ತುಗಳು !

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಾಗಲಿದ್ದು, ಇದರಿಂದ ಕೈ-ಕಾಲುಗಳಲ್ಲಿ ಉರಿ, ಕಣ್ಣಿನ ಉರಿ ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರವನ್ನು ಸೇವಿಸಬೇಕು.

ಈ ರೀತಿಯಾದ ಹಲವು ಮಾರ್ಗಗಳ ಮೂಲಕ ದೇಹದ ಆರೋಗ್ಯವನ್ನು ಬೇಸಿಗೆಯಲ್ಲಿ ಕಾಪಾಡಿಕೊಳ್ಳಬಹುದಾಗಿದೆ.

Exit mobile version