Site icon PowerTV

ಇವಿಎಂ ಡೇಟಾ ಅಳಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

ದೆಹಲಿ: ಇವಿಎಂಗಳ ಡೇಟಾ ಅಳಿಸದಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಇಂದು ತೀರ್ಪು ನೀಡಿದ್ದು. ಮತ ಎಣಿಕೆ ಮುಗಿದ ನಂತರ ಡೇಟಾವನ್ನು ಅಳಿಸಬಾರದು ನ್ಯಾಯಧೀಶ ಸಂಜೀವ್​ ಖನ್ನಾ ಅವರ ಪೀಠ ತೀರ್ಪು ನೀಡಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಚುನಾವಣೆಯ ನಂತರ ಇವಿಎಂ ಮೆಮೊರಿ ಮತ್ತು ಮೈಕ್ರೋಕಂಟ್ರೋಲರ್ ಬರ್ನ್‌ ಮಾಡುದಂತೆ ಮನವಿ ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತ ಅವರಿದ್ದ ಪೀಠವು ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿತು.

ಇದನ್ನೂ ಓದಿ :ಹೆಚ್ಚಾಯ್ತು ಟಾಕ್ಸಿಕ್​ ಸಿನಿಮಾ ಬಜೆಟ್​: ಇಂಗ್ಲೀಷ್​ ಭಾಷೆಯಲ್ಲಿ ಸಪರೇಟ್​ ಶೂಟಿಂಗ್​ !

ಮತ ಎಣಿಕೆ ಮುಗಿದ ನಂತರ ಯಂತ್ರಗಳಿಂದ ಡೇಟಾವನ್ನು ಅಳಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಈ ವೇಳೆ, ಇವಿಎಂನಿಂದ ಯಾವುದೇ ಡೇಟಾವನ್ನು ಅಳಿಸಬೇಡಿ ಅಥವಾ ಯಾವುದೇ ಡೇಟಾವನ್ನು ಮರುಲೋಡ್ ಮಾಡಬೇಡಿ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಹೇಳಿದೆ.

ಸೋತ ಅಭ್ಯರ್ಥಿ ಸ್ಪಷ್ಟೀಕರಣವನ್ನು ಬಯಸಿದರೆ, ಇಂಜಿನಿಯರ್‌ಗಳು ಪರಿಶೀಲಿಸಿ ಯಾವುದೇ ಟ್ಯಾಂಪರಿಂಗ್ ನಡೆದಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಬಹುದು ಎಂದು ನ್ಯಾಯಾಲಯ ಹೇಳಿದು. ಕೋರ್ಟ್‌ ಮಾರ್ಚ್‌ 17ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
Exit mobile version