Site icon PowerTV

ಸ್ವರ್ಗದಿಂದ ಧರೆಗಿಳಿದು ಬಂದ ಕೃಷ್ಣಮೃಗವನ್ನು ನೋಡಿ ಜನರು ಪುಲ್​ ಖುಷ್​ !

ಈ ಜಗತ್ತೆ ಒಂದು ವಿಸ್ಮಯ. ಈ ವಿಸ್ಮಯದಲ್ಲಿ ಅಡಗಿರುವ ವೈಚಿತ್ರಗಳೆಷ್ಟೊ. ಇದೀಗ ಇಲ್ಲೊಂದು ಬಿಳಿ ಬಣ್ಣದ ಜಿಂಕೆಯೊಂದು ನೆಟ್ಟಿಗರ ಮನಸ್ಸನ್ನು ಸೆಳೆದಿದೆ ನೋಡಿ. ಹೌದು ಹಿಮ ಭರಿತ ಕಾಡಿನಲ್ಲಿ ಬಿಳಿ ಬಣ್ಣದ ಅತಿ ಅಪರೂಪದ ಜಿಂಕೆಯೊಂದು ಕಾಣಿಸಿಕೊಂಡಿದ್ದು, ಮಹಿಳೆಯೊಬ್ಬರು ತಮ್ಮ ಕ್ಯಾಮರಾದಲ್ಲಿ ಈ ಸುಂದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಜಿಂಕೆಯ ಸೌಂದರ್ಯಕ್ಕೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಭೂಮಿಯ ಮೇಲೆ ಬೇರೆ ಬೇರೆ ರೀತಿಯ ಪ್ರಾಣಿಗಳು ವಾಸಿಸುತ್ತವೆ. ಅವುಗಳಲ್ಲಿ ಕೆಲವೊಂದು ಅತ್ಯಪರೂಪದ ಇಂತಹ ಜೀವಿಗಳು ಅಪರೂಪಕ್ಕೆ ಕಾಣಿಸಿಕೊಳ್ಳುತ್ತವೆ ಸಾಮಾನ್ಯವಾಗಿ ಜಿಂಕೆಯ ಮೈ ಬಣ್ಣ ಕಂದು. ಅದರ ಮೇಲೆ ಬಿಳಿ ಚುಕ್ಕೆಗಳು ಇರ್ತವೆ. ಇಂತಹ ಜಿಂಕೆಗಳು ನಮ್ಮ ಕಣ್ಣಿಗೆ ಯಾವಾಗಲು ಕಾಣಿಸಿ ಕೊಳ್ತಾ ಇರ್ತವೆ. ಆದರೆ ನೀವು ಬಿಳಿ ಬಣ್ಣದ ಜಿಂಕೆಯನ್ನೆಲ್ಲಾದರೂ ನೋಡಿದ್ದೀರ. ನೋಡಿಲ್ಲ ಅಂದ್ರೆ ಈ ದೃಶ್ಯವನ್ನು ನೋಡಿ.

ಇದನ್ನೂ ಓದಿ :ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಹಲ್ಲೆ: ಒದ್ದು ಒಳಗೆ ಹಾಕಿದ ಪೊಲೀಸರು !

ಇದು ಶ್ವೇತ ವರ್ಣದ ಜಿಂಕೆ ಹಿಮ ಪರ್ವತ ಕಾಡಿನಲ್ಲಿ ಈ ಬಿಳಿ ಜಿಂಕೆ ಕಾಣಿಸಿಕೊಂಡಿದ್ದು, ಪ್ರವಾಸಿಗರೋರ್ವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್​ ಕ್ಯಾಮರದಲ್ಲಿ ಸೆರೆಹಿಡಿದಿದ್ದಾರೆ. ಇದು ಅತೀ ಅಪರೂಪದ ಜಿಂಕೆಯಂತೆ ಇದರ ಹೆಸರು ಅಲ್ವಿನೋ ಅಂತ.. ಸ್ವರ್ಗದಿಂದ ನೇರವಾಗಿ ಧರೆಗಿಳಿದು ಬಂದಿದೆಯೇನೊ ಎಂಬಂತಿದೆ ಈ ಜಿಂಕೆಯ ಸೌಂದರ್ಯ. ಇದೀಗ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜಿಂಕೆಯ ಸೌಂದರ್ಯಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Exit mobile version