Site icon PowerTV

ದಿವಂಗತ ಉದ್ಯೋಗಿಯ ಶವಪೆಟ್ಟಿಗೆಗೆ ಹೆಗಲು ಕೊಟ್ಟ ಲುಲು ಗ್ರೂಪ್​ ಅಧ್ಯಕ್ಷ ಯೂಸಫ್​

ಭಾರತೀಯ ಬಿಲಿಯನೇರ್ ಮತ್ತು ಲುಲು ಗ್ರೂಪ್ ಅಧ್ಯಕ್ಷ ಎಂಎ ಯೂಸುಫ್ ಅಲಿ ಅವರು ತಮ್ಮ ದಿವಂಗತ ಉದ್ಯೋಗಿಯ ಶವಪೆಟ್ಟಿಗೆಯನ್ನು ಹೊತ್ತೊಯ್ಯುವ ವೀಡಿಯೊ ವೈರಲ್ ಆಗಿದ್ದು, ಅವರು ತಮ್ಮ ಸಹಾನುಭೂತಿಯ ಹೃದಯಸ್ಪರ್ಶಿ ಕೃತ್ಯದಿಂದ ಜಾಗತಿಕ ಗಮನ ಸೆಳೆದಿದ್ದಾರೆ. 

ಫೆಬ್ರವರಿ 7, 2025 ರಂದು ಹೃದಯಾಘಾತದಿಂದ ನಿಧನರಾದ ಅಬುಧಾಬಿಯ ಅಲ್ ವಹ್ದಾ ಮಾಲ್ ಲುಲು ಹೈಪರ್‌ಮಾರ್ಕೆಟ್‌ನ ಮೇಲ್ವಿಚಾರಕ ಶಿಹಾಬುದ್ದೀನ್ ಅವರ ಶವಪೆಟ್ಟಿಗೆಗೆ ಹೆಗಲು ಕೊಟ್ಟಿದ್ದು.  “ಹೃದಯಾಘಾತದಿಂದ ನಿಧನರಾದ ಅಬುಧಾಬಿ ಅಲ್ ವಹ್ದಾ ಮಾಲ್ ಲುಲು ಹೈಪರ್‌ಮಾರ್ಕೆಟ್ ಮೇಲ್ವಿಚಾರಕ ಮತ್ತು ತಿರುರ್ ಕಣ್ಮನಂ ಮೂಲದ ಶಿಹಾಬುದ್ದೀನ್ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಎಂಎ ಯೂಸಫ್​ ಹೃದಯಸ್ಪರ್ಷಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಕೋಟ್ಯಾಧಿಪತಿಯ ನಮ್ರತೆ ಮತ್ತು ಸಹಾನುಭೂತಿಯನ್ನು ಶ್ಲಾಘಿಸಿದ್ದಾರೆ. “ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅವನ ಮೃತ ದೇಹದ ಬಳಿ ಪ್ರಾರ್ಥನೆ ಸಲ್ಲಿಸುವುದು ದೇಶದ ಅತಿದೊಡ್ಡ ಕೋಟ್ಯಾಧಿಪತಿ ಮತ್ತು ಮೃತ ವ್ಯಕ್ತಿಯ ಕಂಪನಿಯ ಮಾಲೀಕರು. ಮಾನವೀಯತೆ ಎಂದರೆ ಇದೇ” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಬಾಸ್ ಹೇಗಿರಬೇಕು ಎಂದರೆ ಇದೇ – ಹ್ಯಾಟ್ಸ್ ಆಫ್!” ಎಂದು ಶ್ಲಾಘಿಸಿದ್ದಾರೆ.

Exit mobile version