Site icon PowerTV

ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದ ಯುವತಿ ಹೃದಯಘಾತದಿಂದ ಕುಸಿದು ಬಿದ್ದು ಸಾ*ವು

ಮಧ್ಯಪ್ರದೇಶದ ವಿದಿಶಾದಲ್ಲಿ ಶನಿವಾರ ನಡೆದ ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದಾಗ 23 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇಂದೋರ್‌ನ ಪರಿಣಿತಾ ಜೈನ್ ಅವರು ರೆಸಾರ್ಟ್‌ನಲ್ಲಿ ತಮ್ಮ ಸೋದರ ಸಂಬಂಧಿಯ ಮದುವೆಗೆ ಹಾಜರಾಗಿದ್ದಾಗ ಈ ಘಟನೆ ಸಂಭವಿಸಿದೆ. ‘ಹಲ್ದಿ’ ಸಮಾರಂಭದ ಸಮಯದಲ್ಲಿ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಕುಸಿದು ಬಿದ್ದ ತಕ್ಷಣ ಪರಿಣಿತಾಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಬಂದ ಸ್ವಲ್ಪ ಸಮಯದ ನಂತರ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಎಂಬಿಎ ಪದವೀಧರೆಯಾದ ಪರಿಣಿತಾ ಜೈನ್, ಇಂದೋರ್‌ನ ದಕ್ಷಿಣ ತುಕೋಗಂಜ್‌ನಲ್ಲಿ ತನ್ನ ಪೋಷಕರ ಜೊತೆ ವಾಸಿಸುತ್ತಿದ್ದರು. ದುರಂತವೆಂದರೆ, ಅವರ ಕಿರಿಯ ಸಹೋದರ ಕೂಡ 12 ವರ್ಷದವನಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ :ಬೆಂಗಳೂರು: ಎರಡು ಕೈಗಳ ಮಧ್ಯ ಮುಗಿಯುವ ರೂಂಗೆ 25 ಸಾವಿರ ಬಾಡಿಗೆ, ವಿಡಿಯೋ ವೈರಲ್​

ಈ ವಿಡಿಯೋ ಸಾರ್ವಜನಿಕರಲ್ಲಿ ಆಘಾಥಕ್ಕೆ ಕಾರಣವಾಗಿದ್ದು. ಹಠಾತ್ ಹೃದಯಾಘಾತದಿಂದ ಯುವಕರು ಸಾವನ್ನಪ್ಪಿದ ಕೆಲವು ಇತ್ತೀಚಿನ ಘಟನೆಗಳು ಇಲ್ಲಿವೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ, ಅಗರ್-ಮಾಲ್ವಾ ಜಿಲ್ಲೆಯಲ್ಲಿ ಕ್ರಿಕೆಟ್ ಆಡುತ್ತಿದ್ದಾಗ 15 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಮಧ್ಯಪ್ರದೇಶದಲ್ಲಿ, ಇಂದೋರ್‌ನಲ್ಲಿ ಯೋಗ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ 73 ವರ್ಷದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು.

Exit mobile version