Site icon PowerTV

ಸಿಎಂ ನಿರಪರಾಧಿ ಎಂದು ಆದೇಶ ನೀಡಿಲ್ಲ: ಬಿ.ವೈ ವಿಜಯೇಂದ್ರ

ಬೆಂಗಳೂರು : ಮೂಡ ಹಗರಣದಲ್ಲಿ ಸಿಎಂಗೆ ಧಾರವಾಡ ವಿಭಾಗೀಯ ಪೀಠ ಬಿಗ್​ ರಿಲೀಫ್​ ನೀಡಿದ ಹಿನ್ನಲೆ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ,ವೈ.ವಿಜಯೇಂದ್ರ ‘ಸಿಎಂ ನಿರಪರಾಧಿ ಎಂದು ತೀರ್ಪು ನೀಡಲ್ಲ. ತನಿಖೆ ಪೂರ್ಣಗೊಳ್ಳಲಿ ನೋಡೋಣಾ ಎಂದು ಹೇಳಿದರು.

ಮೂಡ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಧಾರವಾಡ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಈ ಕುರಿತು ವಿಜಯೇಂದ್ರ ಹೇಳಿಕೆ ನೀಡಿದ್ದು. ‘ ಸ್ನೇಹಮಯಿ ಕೃಷ್ಣ ಸಿಬಿಐ ತನಿಖೆಗೆ ಅರ್ಜಿ ಹಾಕಿದ್ರು. ಆದರೆ ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ತನಿಖೆಯನ್ನು ಸಿಬಿಐಗೆ ಕೊಡಲ್ಲ ಎಂದು ಆದೇಶ ಬಂದಿದೆ. ಈ ತೀರ್ಪು ನಮ್ಮ ಹೋರಾಟಕ್ಕೆ ಹಿನ್ನಡೆ ಆಗಿಲ್ಲ.

ಇದನ್ನೂ ಓದಿ :ಸಿಎಂ ಸಿದ್ದರಾಮಯ್ಯಗೆ ಬಿಗ್​ ರಿಲೀಫ್​: ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್​

ನ್ಯಾಯಾಲಯ ಸಿಎಂ ನಿರಪರಾಧಿ ಎಂದು ಕ್ಲೀನ್​​ ಚಿಟ್​ ಕೊಟ್ಟಿಲ್ಲ. ನಾವು ಹೋರಾಟ ಮಾಡಿದ್ದು ಈ ಪ್ರಕರಣದಲ್ಲಿ ಸಿಎಂ ಕುಟುಂಬ ಭಾಗಿ ಆಗಿದೆ ಎಂದು. ಇವರಿಂದ ಸಾವಿರಾರು ಕೋಟಿ ನಷ್ಟ ಆಗಿದೆ
ಎಂದು ಹೋರಾಟ ಮಾಡಿದ್ದೇವೆ. ಲೋಕಾಯುಕ್ತ ತನಿಖೆ ನಡೆತಾ ಇದೆ.ಅವರ ತನಿಖೆ ಹೊರ ಬರಲಿ
ಬಳಿಕ ನೋಡೊಣ. ಇದಾದ ಬಳಿಕ ಉತ್ತರ ನೀಡುತ್ತೇವೆ ಎಂದು ಹೇಳಿದರು.

Exit mobile version