Site icon PowerTV

ಬೈಕ್​ನಲ್ಲಿ ತೆರಳುವಾಗ ಆನೆ ದಾಳಿ: ಜರ್ಮನ್ ಪ್ರವಾಸಿಗ ಸಾ*ವು

ಚೆನ್ನೈ: ಕೊಯಮತ್ತೂರಿನ ವಾಲ್ಪಾರೈ ಬಳಿಯ ಘಾಟಿ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಜರ್ಮನ್ ಪ್ರವಾಸಿಗನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೈಕ್‌ನಲ್ಲಿ ತೆರಳುತ್ತಿದ್ದ ಜರ್ಮನ್ ಪ್ರವಾಸಿಗ ಆನೆಯನ್ನು ಕಂಡು ರಸ್ತೆಯಿಂದ ಪಕ್ಕಕ್ಕೆ ಹೋಗಲು ಪ್ರಯತ್ನಿಸಿದ್ದ. ಆದರೆ, ಇದು ಸಾಧ್ಯವಾಗಿಲ್ಲ. ಆನೆ ಆತನನ್ನು ನೋಡಿ ಹಿಂಬಾಲಿಸಿ ಏಕಾಏಕಿ ದಾಳಿ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಬೈಕ್‌ನ ಹಿಂದೆ ಬರುತ್ತಿದ್ದವರು ವಿಡಿಯೊ ಚಿತ್ರೀಕರಿಸಿದ್ದಾರೆ. ಜರ್ಮನ್ ಪ್ರವಾಸಿಗ ಬೈಕ್ ಬಿಟ್ಟು ಕಾಡಿನೊಳಗೆ ಓಡಿಹೋದರೂ ಬಿಡದೆ ಆನೆ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ :ಹೆಂಡತಿ ಮೇಲೆ ಕಣ್ಣಾಕಿದ ಸ್ನೇಹಿತನ ಕತ್ತಿಗೆ ಮಚ್ಚಿಟ್ಟ ಪತಿ

ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು 77 ವರ್ಷದ ಜರ್ಮನ್ ಪ್ರಜೆ ಮೈಕೆಲ್ ಎಂದು ಗುರುತಿಸಲಾಗಿದೆ. ಆನೆ ದಾಳಿ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

Exit mobile version