Site icon PowerTV

ಮೋದಿ ಪ್ರತಿಯೊಬ್ಬನ ತಲೆ ಮೇಲೆ 1 ಲಕ್ಷ ಸಾಲ ಹೊರಿಸಿದ್ದಾರೆ: ಸಂತೋಶ್​ ಲಾಡ್​

ಹುಬ್ಬಳ್ಳಿ : ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಸಂತೋಶ್​ ಲಾಡ್​ ಮೋದಿ ಪ್ರತಿಯೊಬ್ಬನ ಮೇಲೆ 1 ಲಕ್ಷ ಸಾಲ ಹೊರಿಸಿದ್ದಾರೆ. ಇದೇ ಅವರ ದೊಡ್ಡ ಸಾಧನೆ. ಮೋದಿ ಪಬ್ಲಿಸಿಟಿ ತೆಗೆದುಕೊಂಡು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೆಹಲಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂತೋಶ್​ ಲಾಡ್​ ‘ಸತ್ಯ ಹೇಳಬೇಕು ಎಂದರೆ, ಸರ್ವೇ ಪ್ರಕಾರ ನಮ್ಮ ಪಕ್ಷ 5-10 ಸೀಟ್​ ಗೆಲ್ಲುತ್ತೆ. ಆಪ್ ಪಕ್ಷ ಮೊದಲ ಸ್ಥಾನ ಮತ್ತು ಬಿಜೆಪಿಗೆ ಎರಡನೇ ಸ್ಥಾನ ಸಿಗಲಿದೆ. ದೇಶದ ಜನರು ರಾಹುಲ್ ಗಾಂಧಿ ಅವರನ್ನ ಇನ್ನು ಅರ್ಥ ಮಾಡಿಕೊಂಡಿಲ್ಲ. ಅವರ ಫಿಲಾಸಫಿಯನ್ನು ಜನರಿಗ ಮುಟ್ಟಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ. ಅವರು ಪಾರ್ಲಿಮೆಂಟ್​ನಲ್ಲಿ ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಆದರೆ ಅದನ್ನು ಯಾರು ತೋರಿಸಲ್ಲ. ಅದರ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ :ಶಾಲಾ ಶುಲ್ಕ ಭರಿಸದ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡದೆ ಹೊರಗೆ ಕಳುಹಿಸಿದ ಶಿಕ್ಷಕರು !

ಮೋದಿ ಮೇಲೆ ಲಾಡ್​ ವಾಗ್ದಾಳಿ !

ಮೋದಿ ಮೇಲೆ ವಾಗ್ದಾಳಿ ನಡೆಸಿದ ಲಾಡ್​ ‘ ಬಿಜೆಪಿ ಅವರ ದೇಶದಲ್ಲಿ AI ಯಾವ ಲೆವೆಲ್​ನಲ್ಲಿದ್ದೇವೆ, ಚೈನಾ ನಮ್ಮ ಜೊತೆ ಹೋಲಿಸಿಕೊಳ್ಳೋಕೆ ಆಗಲ್ಲ. 10 ವರ್ಷದಲ್ಲಿ ಚೈನಾ ಏನೆಲ್ಲಾ ಮಾಡಿದೆ ಎಂಬುದು ಗೊತ್ತಿದೆ.
ಡಾಲರ್ ಮುಂದೆ ರೂಪಾಯಿ ದಿನದಿಂದ ದಿನಕ್ಕೆ ಕುಸಿತ ಇದೆ, ದೇಶದ ಸಾಲ ಎಷ್ಟಾಗಿದೆ ಅಂತ ಯಾಕೆ ಕೇಳಬಾರದು. 70 ವರ್ಷದಲ್ಲಿ ಆಗಿರೋ ಸಾಲಕ್ಕಿಂತ ಮೂರು ಪಟ್ಟು ಹೆಚ್ಚು ಸಾಲ ಕಳೆದ 10 ವರ್ಷದಲ್ಲಿ ಆಗಿದೆ.

ಪ್ರಧಾನ ಮಂತ್ರಿ ಮೋದಿ ಪ್ರತಿಯೊಬ್ಬ ಮನುಷ್ಯನ ತಲೆ ಮೇಲೆ 1 ಲಕ್ಷ ಸಾಲ ಹೋರಿಸಿದ್ದಾರೆ. ಇದು ಸಾಧನೆ ಅಲ್ವಾ? ಎಲ್ಲದಕ್ಕಿಂತ ದೊಡ್ಡ ಸಾಧನೆ ಇದು. ಬಲಿಷ್ಠ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ, ಈಗ ಹೊರ ಬಿದ್ದಿದೆ. ನಮ್ಮ ಪಾಸ್​ಪೋರ್ಟ್​ ಜಗತ್ತಿನ ಪಾಸ್​​ಪೋರ್ಟ್​ ಮುಂದೆ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಬಿಜೆಪಿ ಹಾಗೂ ಮೋದಿ ಪಬ್ಲಿಸಿಟಿಗೋಸ್ಕರ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

 

Exit mobile version