Site icon PowerTV

ಬಿಜೆಪಿ ರಾಜ್ಯಾಧ್ಯಕ್ಷನಾಗಲು ನಾನು ಸಿದ್ದ: ರಾಜ್ಯದಲ್ಲಿ 150 ಸೀಟ್​​ ಗೆಲ್ಲಿಸುತ್ತೇನೆ : ಶ್ರೀರಾಮುಲು

ಕೋಲಾರ : ರಾಜ್ಯ ಬಿಜೆಪಿಯ ಬಣ ಬಡಿದಾಟ ದೆಹಲಿಗೆ ಶೆಫ್ಟ್​​ ಆಗಿದೆ. ಈ ನಡುವೆ ಮಾಜಿ ಸಚಿವ ಶ್ರೀರಾಮುಲು ಬಿಗ್​ ಸ್ಟೇಟ್​ಮೆಂಟ್​ ನೀಡಿದ್ದು. ನಾನು ರಾಜ್ಯಧ್ಯಕ್ಷನಾಗಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಶ್ರೀರಾಮುಲು ‘ನಾನು ಬಿಜೆಪಿಯಲ್ಲಿ ಅಧ್ಯಕ್ಷನಾದರೆ ಈ ಗುಂಪುಗಾರಿಕೆಯನ್ನು ನಿಲ್ಲಿಸುತ್ತೇನೆ. ನಾನು ರಾಜ್ಯ ಬಿಜೆಪಿ ಅಧ್ಯಕ್ಷನಾಗಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರ ಆರ್ಶೀವಾದ ಮತ್ತು ಹೈಕಮಾಂಡ್​ ಬಯಸಿದರೆ ಬಿಜೆಪಿ ಅಧ್ಯಕ್ಷನಾಗಲು ಸಿದ್ದನಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ :ಅಮೇರಿಕಾ ಸೇನಾ ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದ ಅಕ್ರಮ ಭಾರತೀಯ ವಲಸಿಗರು !

ಮುಂದುವರಿದು ಮಾತನಾಡಿದ ಬಿ.ಶ್ರೀರಾಮುಲು ‘ವಿಜಯೇಂದ್ರ ರಾಜ್ಯ ಬಿಜೆಪಿಗೆ ಅಧ್ಯಕ್ಷನಾಗಲು ಕಾರಣ ಯಡಿಯೂರಪ್ಪನವರು. ಒಮದು ವೇಳೆ ಅಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಬದಲಾದರೆ ನಾನು ಕೂಡ ರಾಜ್ಯಧ್ಯಕ್ಷ ಸ್ಥಾನದ ಅಧ್ಯಕ್ಷನಾಗಲು ಆಕಾಂಕ್ಷಿಯಾಗಿದ್ದೇನೆ. ಈಗಿನ ಸ್ಥಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆ ಇದೆ.

ಒಂದು ವೇಳೆ ನಾನು ಅಧ್ಯಕ್ಷನಾದರೆ 2028ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ರಾಜ್ಯದಲ್ಲಿ ಬಿಜೆಪಿಗೆ 150 ಸೀಟ್​ಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ತರುತ್ತೇನೆ, ನಾನು ಅಧ್ಯಕ್ಷನಾಗಲು ಬಸನಗೌಡ ಯತ್ನಾಳರ ಸಹಮತವಿದೆ ಎಂದು ಹೇಳಿದರು.

Exit mobile version