Site icon PowerTV

ಪುರಾತನ ದೇಗುಲವನ್ನು ಬಾರ್​ ಆ್ಯಂಡ್​ ರೆಸ್ಟೂರೆಂಟ್​ ಮಾಡಿಕೊಂಡ ಕುಡುಕರು

ಚಾಮರಾಜನಗರ: ಪುರಾತನ ದೇಗುಲ, ಒಂದು ಕಾಲದಲ್ಲಿ ಭಕ್ತರ ಸಕಲ ಇಷ್ಟಾರ್ಥವನ್ನು ನೆರವೇರಿಸಿದ್ದ ಈ ಶಿವಲಿಂಗದ ಮುಂದೆ ಈಗ ಮದ್ಯದ ಘಾಟು, ಬೀಡಿ-ಸಿಗರೇಟ್ ಘಮಲಿನಿಂದ ಗಬ್ಬೆದು ಹೋಗಿದೆ‌‌‌.
ಚಾಮರಾಜನಗರದ 17ನೇ ವಾರ್ಡ್ ಉಪ್ಪಾರ ಬಡಾವಣೆಯಲ್ಲಿರುವ ಈ ದೇಗುಲವನ್ನು ಮೈಸೂರಿನ ಮಹರಾಜರು ಕಟ್ಟಿಸಿದ್ದರು, ಆದರೀಗ,ಹಾಳುಕೊಂಪೆಯಾಗಿದೆ.

ಪಾಳುಬಿದ್ದ ದೇವಸ್ಥಾನದಲ್ಲಿ ಕುಡುಕರು, ನಶೆಗೆ ದಾಸರಾಗಿರುವವರು ಲಿಂಗದ ಮುಂದೆ ಕುಳಿತು ಮದ್ಯ ಸೇವನೆ, ಸಿಗರೇಟ್ , ಬೀಡಿ ಹೊಗೆ ಬಿಡುತ್ತಿರುವುದು ಹಿಂದೂ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ದೇವಾಲಯ ಪ್ರಾಂಗಣದ ತುಂಬೆಲ್ಲಾ ಮದ್ಯದ ಪೌಚುಗಳು , ಖಾಲಿ ಲೋಟಗಳ ರಾಶಿ ಬಿದ್ದಿದ್ದು ದೇಗುಲವನ್ನೇ ಬಾರ್ ಅಂಡ್ ರೆಸ್ಟೋರೆಂಟ್ ಆಗಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮ್ಯಾಕ್ಸ್​​ ಸಿನಿಮಾ ಸಕ್ಸಸ್​​ ಬೆನ್ನಲ್ಲೆ: ಮ್ಯಾಕ್ಸ್​ ಹಿಂದಿನ ಕಥೆ ಹೇಳಲು ಮುಂದಾದರ ಕಿಚ್ಚ

ಈ ಪಾಳು ದೇವಾಲಯ ಕುಡುಕರ ಅಡ್ಡೆಯಾಗಿದ್ದು ಸಂಬಂಧಪಟ್ಟವರು ಇದಕ್ಕೆ ಕಡಿವಾಣ ಹಾಕಬೇಕು, ಪುರಾತನ ದೇಗುಲವನ್ನು ರಕ್ಷಿಸಿಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಇದೇ ರೀತಿ ಸಾಕಷ್ಟು ದೇವಾಲಯಗಳ ಅವರಣದಲ್ಲಿ ಕೆಟ್ಟ ಚಟುವಟಿಕೆಗಳು ನಡೆಯುತ್ತಿವೆ ಇದಕ್ಕೆಲ್ಲ ಕೂಡಲೇ ಕಡಿವಾಣ ಬೀಳಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.

 

Exit mobile version