Site icon PowerTV

ದೆಹಲಿ ಚುನಾವಣೆ : ಬಹುತೇಕ ಬಿಜೆಪಿಗೆ ಅಧಿಕಾರ ಎಂದ ಎಕ್ಸಿಟ್​ ಪೋಲ್​ಗಳು

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆ ಮುಕ್ತಾಯವಾಗಿದ್ದು. ಮತದಾರ ನೀಡಿರುವ ತೀರ್ಪು ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಸಂಜೆ ಐದು ಗಂಟೆಯ ವೇಳೆಗೆ 57.7ರಷ್ಟು ಮತದಾನವಾಗಿದ್ದು. ಇನ್ನು ಎರಡು ದಿನಗಳಲ್ಲಿ ಮತಎಣಿಕೆ ಕಾರ್ಯ ನಡೆಯಲಿದೆ. ಇದರ ನಡುವೆ ಅನೇಕ ಎಕ್ಸಿಟ್​ ಪೋಲ್​ಗಳು ಭವಿಷ್ಯ ನುಡಿದಿವೆ.

ಒಟ್ಟು 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯ ಗದ್ದುಗೆ ಹಿಡಿಯಲು 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುದು ಅನಿವಾರ್ಯವಾಗಿದ್ದು. ಎಎಪಿ ಮತ್ತು ಬಿಜೆಪಿ ನಡುವೆ ನೇರಾ ನೇರಾ ಸ್ಪರ್ಧೆ ಏರ್ಪಟ್ಟಿದೆ. ಇದರ ನಡುವೆ ಕಾಂಗ್ರೆಸ್​ ಕೂಡ ಈ ಬಾರಿ ಪೈಪೋಟಿ ನೀಡಿದೆ. ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿರುವ ಎಎಪಿ ಈ ಬಾರಿಯೂ ಗದ್ದುಗೆನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದೆಯಾದರೂ, ಅರವಿಂದ್​ ಕೇಜ್ರಿವಾಲ್​ ಮೇಲೆ ಬಂಧಿರುವ ಅಬಕಾರಿ ಹಗರಣ, ಯುಮುನ ನದಿಯ ಸ್ವಚ್ಚತೆ, ದೆಹಲಿಯ ವಾಯು ಮಾಲಿನ್ಯ ಈ ಎಲ್ಲಾ ಕಾರಣಗಳು ಎಎಪಿಗೆ ನೆಗೆಟಿವ್​ ಆಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಹುತೇಕ ಎಲ್ಲಾ ಎಕ್ಸಿಟ್​ ಪೋಲ್​ಗಳು ಬಿಜೆಪಿಗೆ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದಿದ್ದು. 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯ ಗದ್ದುಗೆಯನ್ನು ಬಿಜೆಪಿ ಹಿಡಿಯಲಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ ದೈನಿಕ್​ ಬಾಸ್ಕರ್​ ಸಂಸ್ಥೆ ಆಪ್​ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಮತಧನೋತ್ತರ ಫಲಿತಾಂಶ ನೀಡಿದೆ

ಎಕ್ಸಿಟ್​ ಪೋಲ್​ ರಿಸಲ್ಟ್​​ !

 

Exit mobile version