Site icon PowerTV

ಈ ದರಿದ್ರ ಸರ್ಕಾರ ಇಡೀ ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡಿದೆ : ಆರ್​. ಅಶೋಕ್​

ಹಾಸನ : ಜಿಲ್ಲೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್​.ಅಶೋಕ್​ ‘ಇಂತಹ ದರಿದ್ರ ಸರ್ಕಾರವನ್ನು ರಾಜ್ಯದ ಜನರು ಇತಿಹಾಸದಲ್ಲಿ ನೋಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಎಲ್ಲಾ ಕಡೆ ಅತ್ಯಾಚಾರ, ಕೊಲೆ ನಡೆಯುತ್ತಿವೆ ಎಂದು ಹೇಳಿದರು.

ಮಾಧ್ಯಮದ ವೇಳೆ ಮಾತನಾಡುತ್ತಾ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆರ್​.ಅಶೋಕ್​ ‘ಸಿದ್ದರಾಮಯ್ಯ ಅವರು ನ.15 ಅಥವಾ ನ.16 ರಂದು ಕುರ್ಚಿ ಖಾಲಿ ಮಾಡ್ತಾರೆ. ಅಷ್ಟರಲ್ಲಿ ಇಡೀ ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡಿ ಹೋಗ್ತಾರೆ.ಆಮೇಲೆ ಡಿಕೆ‌ ಬರ್ತಾರೋ, ಪರಮೇಶ್ವರ್ ಬರ್ತಾರೋ, ಜಾರಕಿಹೋಳಿ ಬರ್ತಾರೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಹೋಗುವ ವೇಳೆಗೆ ಎಲ್ಲವನ್ನು ಖಾಲಿ ಮಾಡಿ ಹೋಗಿರುತ್ತಾರೆ.

ಇದನ್ನೂ ಓದಿ : ಅಕ್ರಮ ಸಂಬಂಧ ಬೆಳೆಸುವಂತೆ ಒತ್ತಾಯ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹ*ತ್ಯೆ

ಇಂತಹ ದರಿದ್ರ ಸರ್ಕಾರ, ಪಾಪಾರ್ ಆಗಿರುವ ಸರ್ಕಾರ ಕರ್ನಾಟಕದಲ್ಲಿ ಬಂದಿಲ್ಲ. ಎಲ್ಲದರ ಮೇಲೂ ಟ್ಯಾಕ್ಸ್ ಹಾಕುತ್ತಿದ್ದಾರೆ. ಗಾಳಿ ಒಂದನ್ನು ಬಿಟ್ಟಿದ್ದಾರೆ ಅಷ್ಟೇ, ಅಧಿಕಾರಿ, ಕಂಟ್ರಾಕ್ಟರ್‌ಗಳು ಕೆಲಸಕ್ಕೆ ಹೋದರೆ ವಾಪಾಸ್ ಬರ್ತಾರೋ ಗ್ಯಾರೆಂಟಿ ಇಲ್ಲ. ಮನೆಹಾಳು ಸರ್ಕಾರ ಇದು, ಇಂತಹ ಮನೆಹಾಳು ಸರ್ಕಾರ ಇತಿಹಾಸದಲ್ಲಿ ಬಂದಿಲ್ಲ.

ಪೊಲೀಸರು ದುಡ್ಡು ಕೊಟ್ಟು ವರ್ಗಾವಣೆ ದಂಧೆಯಲ್ಲಿ ಬಂದಿದ್ದಾರೆ, ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮೈಕ್ರೋ‌ಫೈನಾನ್ಸ್‌ಗೆ ಪೊಲೀಸರ ಮೇಲೆ ಭಯ ಇಲ್ಲ, ಕೊಲೆ, ಅತ್ಯಾಚಾರ, ಕಳ್ಳತನ ನಡೆಯುತ್ತಲೇ ಇವೆ, ಯಾರಿಗೂ ಪೊಲೀಸರನ್ನು ಕಂಡರೆ ಭಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Exit mobile version