Site icon PowerTV

ದೇವರ ಮೂರ್ತಿಗೆ ಬೆಂಕಿ ಇಟ್ಟು ವಿಕೃತಿ !

ಯಾದಗಿರಿ : ದೇವರ ಮೂರ್ತಿಗೆ ಬೆಂಕಿ ಇಟ್ಟು ವಿಕೃತಿ ಮೆರೆದಿರುವ ಘಟನೆ ಯಾದಗಿರಿಯಲ್ಲಿ ನಡೆದಿದ್ದು. ಯಾರೋ ಕಿರಾತಕರು ದೇವಾಲಯದ ಬೀಗ ಮುರಿದು ಮೂರ್ತಿಗೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದಾರೆ ಎಂದು ತಿಳಿದು ಬಂದಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು. ರಾತ್ರೋ ರಾತ್ರಿ ಗ್ರಾಮದ ಸೀಮೆ ಮರೆಮ್ಮ ದೇವಾಲಯದ ಭೀಗ ಮುರಿದು ದೇವಾಲಯಕ್ಕೆ ಎಂಟ್ರಿ ಕೊಟ್ಟಿರುವ ಕಿರಾತಕರು. ಸಿಂಹದ ಮೇಲೆ ಕುಳಿತಿರುವ ಮರೆಮ್ಮ ದೇವರ ಮೂರ್ತಿಗೆ ಬೆಂಕಿ ಇಟ್ಟಿದ್ದಾರೆ. ಅರ್ಧಂಬರ್ಧ ಸುಟ್ಟಿದ್ದ ದೇವರ ಮೂರ್ತಿಯನ್ನು ಕಿತ್ತು ಎಸೆದು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ವಾಹನ ಸವಾರರೇ ಎಚ್ಚರ: ರೂಲ್ಸ್​ ಬ್ರೇಕ್​ ಮಾಡಿದರೆ, ಲೈಸೆನ್ಸ್​ ಕ್ಯಾನ್ಸಲ್​ !

ಬೆಳಿಗ್ಗೆ ಎಂದಿನಂತೆ ಗ್ರಾಮಸ್ಥರು ಪೂಜೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದ್ದು. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Exit mobile version