Site icon PowerTV

ಸಿಎಂ ಬದಲಾವಣೆ ಬಗ್ಗೆ ಅಶೋಕ್​ ಬಳಿ ಜೋತಿಷ್ಯ ಕೇಳುತ್ತೇನೆ : ಡಿ.ಕೆ ಶಿವಕುಮಾರ್​

ಬೆಂಗಳೂರು : ನವೆಂಬರ್​ನಲ್ಲಿ ಸಿಎಂ ಬದಲಾವಣೆ ಆಗುತ್ತದೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ಹೇಳಿಕೆ ವಿಚಾರಕ್ಕೆ ವ್ಯಂಗ್ಯವಾಡಿದ ಡಿಸಿಎಂ ಡಿಕೆ.ಶಿವಕುಮಾರ್​ ‘ ನನಗೂ ಅಸ್ಟ್ರಾಲಜಿ ಬಗ್ಗೆ ಗೊತ್ತಿದೆ, ಆದರೆ ಅವರು ಯಾವಗ ಬೋರ್ಡ್​ ಹಾಕಿಕೊಂಡ್ರೋ ಗೊತ್ತಿಲ್ಲ. ನಾನು ಶೀಘ್ರದಲ್ಲೆ ಅವರಿಂದ ಜೋತಿಷ್ಯ ಕೇಳುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ :ಸತೀಶ್​ ಜಾರಕಿಹೋಳಿಯನ್ನು ಸಿಎಂ ಮಾಡಲು ಹರಕೆ ಕಟ್ಟಿಕೊಂಡ ಅಭಿಮಾನಿಗಳು

ನಿರ್ಮಲಾ ಸೀತಾರಾಮನ್​ ವಿರುದ್ದ ವಾಗ್ದಾಳಿ ನಡೆಸಿದ ಡಿಕೆಶಿ !

ರಾಜ್ಯ ಸರ್ಕಾರಿ ದಿವಾಳಿ ಆಗಿದೆ ಎಂಬ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಡಿಕೆಶಿ​ ‘ಪ್ರಧಾನಿಯವರು ಗ್ಯಾರಂಟಿ ಬಗ್ಗೆ ಏನು ಹೇಳಿದ್ದಾರೆ. ನಾವು ಗ್ಯಾರಂಟಿ ಕೊಟ್ಟಾಗ ಸರ್ಕಾರ ದಿವಾಳಿ ಆಗುತ್ತೆ ಎಂದಿದ್ದರು. ಆದರೆ ರಾಜ್ಯದ ಹೆಣ್ಣು ಮಕ್ಕಳು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಅವರು ಬದುಕೋಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ನಾವು ಗ್ಯಾರೆಂಟಿ ತಂದಿದ್ದು, ಆದರೆ ಈಗ ಅವರೇ ಎಲ್ಲಾ ಕಡೆ ಶುರು ಮಾಡಿದ್ದಾರೆ. ಭದ್ರಾ ಯೋಜನೆಗೆ 5300 ಕೋಟಿ ನೀಡುವ ವಿಚಾರದಲ್ಲಿ ಮಾತು ಉಳಿಸಿಕೊಳ್ಳಲಿ ಎಂದು ನಿರ್ಮಾಲಾ ಸೀತಾರಾಮನ್​ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

 

Exit mobile version