Site icon PowerTV

ಖ್ಯಾತ ಗಾಯಕ ಸೋನು ನಿಗಮ್​ ಆಸ್ಪತ್ರೆಗೆ ದಾಖಲು: ಲೈವ್​ ಕಾನ್ಸರ್ಟ್​ ವೇಳೆ ಏನಾಯಿತು !

ಲೈವ್ ಪರ್ಫಾಮೆನ್ಸ್​ ವೇಳೆ ಬೆನ್ನು ನೋವಿನಿಂದ ಖ್ಯಾತ ಗಾಯಕ ಸೋನು ನಿಗಮ್​ ಒದ್ದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು. ಕಾರ್ಯಕ್ರಮ ಮುಗಿದ ನಂತರ ಗಾಯಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹೌದು.. ತಮ್ಮದೆ ಬ್ಯಾಂಡ್​ ಟೀಮ್​ ಹೊಂದಿರುವ ಗಾಯಕ ಸೋನು ನಿಗಮ್​ ಆಗಾಗೆ ಕಾನ್ಸರ್ಟ್​ಗಳನ್ನು ನೀಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಹಾಡುವ ವೇಳೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಆದರೆ ಈ ವೇಳೆ ಅದನ್ನು ತೋರಿಸಿಕೊಳ್ಳದೆ ಹಾಡು ಹೇಳಿ ಜನರನ್ನು ರಂಜಿಸಿದ್ದಾರೆ. ಆ ಬಳಿಕೆ ಏನಾಯಿತು ಎಂದು ಅವರು ವಿಡಿಯೋ ಮೂಲಕ ವಿವರಿಸಿದ್ದಾರೆ.

ವಿಡಿಯೋದನ್ನು ಏನಿದೆ !

ಸೋನು ನಿಗಮ್ ಅವರು ಆಸ್ಪತ್ರೆಯಲ್ಲಿ ಮಲಗಿದ್ದು, ಏನಾಯಿತು ಎಂಬುದನ್ನು ವಿವರಿಸಿದ್ದಾರೆ. ‘ನನ್ನ ಜೀವನದ ಅತ್ಯಂತ ಕಷ್ಟದ ದಿನ. ನಾನು ಹಾಡು ಹೇಳುತ್ತಾ, ವೇದಿಕೆ ಮೇಲೆಲ್ಲ ಓಡಾಡುತ್ತಾ ಇದ್ದೆ. ಆಗ ನೋವು ಕಾಣಿಸಿಕೊಂಡಿತು. ಆದರೆ, ಹೇಗೋ ಮ್ಯಾನೇಜ್ ಮಾಡಿದೆ. ಜನರು ನನ್ನಿಂದ ಎಷ್ಟನ್ನು ನಿರೀಕ್ಷಿಸುತ್ತಾರೋ ಅದಕ್ಕಿಂತ ಕಡಿಮೆ ಕೊಡಲು ನನಗೆ ಇಷ್ಟ ಇಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :ಕೆರೆಯಲ್ಲಿ ಈಜಲು ಹೋಗಿ ಸಾ*ವು: ದುರಂತ ಅಂತ್ಯ ಕಂಡ ಸ್ನೇಹಿತರು

‘ಅತಿಯಾದ ನೋವು ಕಾಣಿಸಿತ್ತು. ನನ್ನ ಬೆನ್ನು ಹುರಿಗೆ ಯಾರೋ ಇಂಜೆಕ್ಷನ್ ಸೂಜಿ ಇಟ್ಟಿದ್ದಾರೆ ಅನಿಸುತ್ತಿತ್ತು. ಸ್ವಲ್ಪ ಅಲ್ಲಾಡಿದರೂ ನೋವು ಕಿತ್ತು ಬರುತ್ತಿತ್ತು’ ಎಂದು ಅವರು ಹೇಳಿರೋ ಅವರು ವಿಡಿಯೋ ಕ್ಯಾಪ್ಶನ್​ನಲ್ಲಿ ‘ರಾತ್ರಿ ಸರಸ್ವತಿ ನನ್ನ ಕೈ ಹಿಡಿದರು’ ಎಂದಿದ್ದಾರೆ.

 

Exit mobile version