ನಡುರಾತ್ರಿ ಯುವತಿಯರ ರೂಂಗೆ ನುಗ್ಗಿದ ಹೋಂಗಾರ್ಡ್: ಹಾವಿನ ಟ್ಯಾಟು ನೋಡಿ ಅಶ್ಲೀಲ ಮಾತು !

ಬೆಂಗಳೂರು : ಕೇರಳದಿಂದ ಬೆಂಗಳೂರಿಗೆ ಬಂದು ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಗೆ ಹೋರ್ಮಗಾರ್ಡ್​ ಒಬ್ಬ ಲೈಂಗಿ ಕಿರುಕುಳ ನೀಡಿದ್ದು. ಘಟನೆ ಸಂಬಂಧ ಸದಾಶಿವ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಎಸ್​​​ ರಾಮಯ್ಯ ಕಾಲೇಜಿನಲ್ಲಿ 2ನೇ ವರ್ಷದ ಬಿಎಸ್​ಸಿ ಓದುತ್ತಿದ್ದ ವಿದ್ಯಾರ್ಥಿನಿ ಮೂವರು ಸ್ನೇಹಿತೆಯರ ಜೊತೆ ರೂಂ‌ ಮಾಡಿಕೊಂಡಿದ್ದಳು. ಜನವರಿ 25ರಂದು ಊಟ ಮಾಡಿ ಮಲಗಿಕೊಂಡಿದ್ದಾಗ ರಾತ್ರಿ ಯಾರೋ ಕದ ತಟ್ಟಿದ್ದಾರೆ ಎಂದು ಯುವತಿಯರು ಬಾಗಿಲು ತೆಗೆದಿದ್ದಾರೆ. ಈ ವೇಳೆ ಪೊಲೀಸ್ ಅಂತ ಹೇಳುವ ಹೋಮ್​ ಗಾರ್ಡ್​ ರಮೇಶ್​ ಏಕಾಏಕಿ ರೂಂಗೆ ನುಗ್ಗಿ ಬಾಗಿಲು ಲಾಕ್​ ಮಾಡಿದ್ದಾನೆ.

ಈ ವೇಳೆ ಯುವತಿ ತನ್ನ ಸ್ನೇಹಿತನಿಗ ಕರೆ ಮಾಡಿ ಪೊಲೀಸರು ಬಂದಿದ್ದಾರೆ ಎಂದು ತಿಳಿಸುತ್ತಾಳೆ. ಈ ವೇಳೆ ಆರೋಪಿ ರಮೇಶ್​ ಯುವತಿಯರಿಗೆ ಹೆದರಿಸಿ ಮೊಬೈಲ್​ ಕಿತ್ತುಕೊಂಡಿದ್ದಾನೆ. ಜೊತೆಗೆ ಯುವತಿ ಕೈಯಲ್ಲಿದ್ದ ಹಾವಿನ ಟ್ಯಾಟೋ‌ ನೋಡಿ, ನನ್ನ ಹಾವು ತೋರಿಸ್ತೇನೆಂದು ಅಶ್ಲಿಲವಾಗಿ ಮಾತನಾಡಿದ್ದಾನೆ. ಯುವತಿ ಮೊಬೈಲ್​ ಕರೆ ಮಾಡಿದ್ಳು ಎಂದು ಬಂದಿದ್ದ ಯುವತಿ ಸ್ನೇಹಿತನಿಗೂ ಕಿರುಕುಳ ನೀಡಿದ್ದಾನೆ. ಎಲ್ಲರನ್ನು ಮಂಡಿಕಾಲಿನಲ್ಲಿ ನಿಲ್ಲಿಸಿ ಟಾರ್ಚರ್​​ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಕಾರ್​ ಡೋರ್​ ತಗುಲಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ BMTC ಬಸ್​​: ಓರ್ವ ಮಹಿಳೆ ಸಾ*ವು

ತಡರಾತ್ರಿ 1.30 ಸುಮಾರಿಗೆ ಇನ್ನೊಬ್ಬ ಯುವಕ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು. ಸ್ಥಳಕ್ಕೆ‌ ಸದಾಶಿವ ನಗರ ಪೊಲೀಸರು ಬರ್ತಿದ್ದಂತೆ ವ್ಯಕ್ತಿಯ ಬಣ್ಣ ಬಯಲಾಗಿದೆ. ರಮೇಶ್​ ಕಳೆದ 6 ತಿಂಗಳಿಂದ ಕ್ರೈಂ ಬ್ರಾಂಚ್​ ಅಧಿಕಾರಿ ಎಂದು ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದ್ದು. ಸದಾಶಿವ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ​

ಹೋಂಗಾರ್ಡ್ ಒಬ್ಬ ನಾನು ಪೊಲೀಸರು ಅಂತ ಕಿರುಕುಳ ಕೊಡ್ತಿದ್ದ ಅನ್ನೋದು ಗೊತ್ತಾಗುತ್ತೆ
ಕಳೆದ 6 ತಿಂಗಳಿನಿಂದ ಕ್ರೈಂ ಬ್ರಾಂಚ್ ಪೊಲೀಸ್ ಅಂತ ಯುವತಿಯರಿಗೆ ಹಾಗೂ ಆಕೆ ಗೆಳೆಯರಿಗೆ ಟಾರ್ಚರ್
ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ‌ ಹೋಂ ಗಾರ್ಡ್ ರಮೇಶ್ ವಿರುದ್ಧ ಪ್ರಕರಣ ದಾಖಲು.

RELATED ARTICLES

Related Articles

TRENDING ARTICLES