27 ಲಕ್ಷ ಮೌಲ್ಯದ ನಕಲಿ ಸಿಗರೇಟ್​ ಸೀಜ್​: ಧೂಮಪಾನಿಗಳೇ ಎಚ್ಚರ

ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತಾ ಗೊತ್ತಿದ್ದರು ಜನ ಮಾತ್ರ ಅದನ್ನು ಬಿಡಲ್ಲ. ಜನರ ಈ ಚಟವನ್ನೇ ಬಂಡವಾಳ ಮಾಡಿಕೊಂಡಿರೋ ಕೆಲ ಐನಾತಿಗಳು ಸಿಗರೇಟ್​ಗಳನ್ನು ಸಹ ನಕಲಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಈಗ ಪೊಲೀಸರು ಇಂತಹ ಒಂದು ಜಾಲವನ್ನು ಭೇದಿಸಿ ಆರೋಪಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಇತ್ತೀಚೆಗೆ ಯಾವುದು ನಕಲಿ ಯಾವುದು ಅಸಲಿ ಅನ್ನೋದೆ ಗೊತ್ತಾಗ್ತಿಲ್ಲ. ತಿನ್ನೋ ಆಹಾರದಿಂದ ಹಿಡಿದು ವಾಶ್ ರೂಂ ತೊಳೆಯೋ ವಸ್ತುಗಳು ಸಹ ಕಲಬೆರಕೆಯಾಗುತ್ತಿವೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ನಕಲಿ ವಸ್ತುಗಳ ಹಾವಳಿ ಜೋರಾಗಿದೆ.‌ ಅನೇಕ ಬಾರಿ ಬೆಂಗಳೂರು ಪೊಲೀಸರು ನಕಲಿ ವಸ್ತುಗಳನ್ನು ಸೀಜ್ ಮಾಡ್ತಾನೆ ಇರ್ತಾರೆ.‌ ಈಗ ಅಂತಹದ್ದೇ ಒಂದು ನಕಲಿ ಪ್ರಾಡಕ್ಟ್ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ವಿಲ್ಸನ್ ಗಾರ್ಡನ್ ಪೊಲೀಸರು ಭೇದಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ಬಳಿ ಕಣ್ಣುಗುಡ್ಡೆ ಕಿತ್ತು ಯುವತಿಯ ಅತ್ಯಾಚಾರ-ಹ*ತ್ಯೆ: ಶ್ರೀರಾಮ, ತಾಯಿ ಸೀತಾ, ನೀವು ಎಲ್ಲಿದ್ದೀರಿ? ಎಂದ ಸಂಸದ

ಹೌದು ಸಿಲಿಕಾನ್ ಸಿಟಿ ಬೆಂಗಳೂರಿಗೆ ರಾಷ್ಟ್ರದ ರಾಜಧಾನಿ ದೆಹಲಿಯಿಂದ ನಕಲಿ ಸಿಗರೇಟ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. ಐಟಿಸಿ ಕಂಪನಿಯ ಸಿಗರೇಟ್ ಮಾದರಿಯಲ್ಲಿ ಅಸಲಿ ಸಿಗರೇಟ್ ತಲೆ ಮೇಲೆ ಹೊಡೆದ ಹಾಗೇ ನಕಲಿ ಸಿಗರೇಟ್ ತಯಾರಿಸಲಾಗುತ್ತಿತ್ತು.ಜ್ಯೂಸ್ ಪ್ಯಾಕೇಟ್ ಗಳು ತುಂಬಿರುವ ಬಾಕ್ಸ್ ಅಂತಾ ಹೇಳಿಕೊಂಡು ನಕಲಿ ಸಿಗರೇಟ್ ಸಪ್ಲೈ ಮಾಡಲಾಗುತ್ತಿತ್ತು. ಇದರಿಂದ ಐಟಿಸಿ ಕಂಪನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು.

ಇನ್ನೂ ನಕಲಿ ಸಿಗರೇಟ್ ಮಾರಾಟ ಮಾಡುತ್ತಿರುವ ಆರೋಪಿಗಳ ಕಳ್ಳಾಟ ಐಟಿಸಿ ಕಂಪನಿಗೆ ಗೊತ್ತಾಗಿದೆ‌. ಕೂಡಲೇ ವಿಲ್ಸಲ್ ಗಾರ್ಡನ್ ಪೊಲೀಸರಿಗೆ ಮಾಹಿತಿ ಕೊಟ್ಟಿದ್ರು. ಪೊಲೀಸರು ಅಷ್ಟೇ ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಯೂಸಫ್ ಎಂಬಾತನನ್ನು ಬಂಧಿಸಿ 27 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಸೀಜ್ ಮಾಡಿದ್ದಾರೆ.

 

ಜೊತೆಗೆ ನಕಲಿ ಸಿಗರೇಟ್ ಸಾಗಿಸಲು ಬಳಸಿದ್ದ ಒಂದು ಗೂಡ್ಸ್ ಗಾಡಿ, ಆರೋಪಿ ಬಳಸುತ್ತಿದ್ದ ಕಾರನ್ನು ಸೀಜ್ ಮಾಡಿ ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಒಂದೇ ದಿನ ಬೆಂಗಳೂರಿಗೆ ಇಷ್ಟೊಂದು ಮೌಲ್ಯದ ನಕಲಿ ಸಿಗರೇಟ್ ಬರುತ್ತಿದೆ ಅಂದ್ರೆ ತಿಂಗಳಲ್ಲಿ ಎಷ್ಟು ಸಪ್ಲೈ ಆಗುತ್ತಿದೆ ಎಂಬುದನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನಾದ್ರು ಸಂಬಂಧಪಟ್ಟವರು ಈ ನಕಲಿ ವಸ್ತುಗಳ ಹಾವಳಿ ತಡೆಯಬೇಕಿದೆ.

RELATED ARTICLES

Related Articles

TRENDING ARTICLES